ಪುತ್ತೂರು: ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ, ಹಳೆಗೇಟು ಶಿವಾಜಿ ಯುವ ವೃಂದ ಹಾಗೂ ಶಿವಾಜಿ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಉಚಿತ ಯಕ್ಷಗಾನ ತರಬೇತಿ ಶಿಬಿರ ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದಲ್ಲಿ ಆರಂಭಗೊಂಡಿತು.
ಮುಖೇಶ್ ಬೆಟ್ಟಂಪಾಡಿ ಅವರ ಸಂಯೋಜನೆಯಲ್ಲಿ ಉಚಿತ ಯಕ್ಷಗಾನ ತರಬೇತಿ ಶಿಬಿರವನ್ನು ಯಕ್ಷಗಾನ ಗುರು ಶಶಿಕಿರಣ್ ಕಾವು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿವಾಜಿ ಗೆಳೆಯರ ಬಳಗದ ಅಧ್ಯಕ್ಷ ರಾಧಕೃಷ್ಣ ನಾಯಕ್,
ಕಾರ್ಯದರ್ಶಿ ಭಾಸ್ಕರ್ ಎಂ.ಎಸ್,ಮಂಜುನಾಥೇಶ್ವರ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಬೆಟ್ಟಂಪಾಡಿ, ಭಜನಾ ಮಂಡಳಿ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ, ಸನತ್ ಬರಮೇಲು ಉಪಸ್ಥಿತರಿದ್ದರು. ಬಳಿಕ ಯಕ್ಷಗಾನ ಗುರು ಶಶಿಕುಮಾರ್ ಕಾವು ತರಬೇತಿ ಕಾರ್ಯಗಾರ ನಡೆಸಿದರು. ಪರಿಸರದ ಮಕ್ಕಳು ಭಾಗವಹಿಸಿದರು. ಮಂದಿರದ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.