ಸವಣೂರು: ಸವಣೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸವಣೂರು ವಿದ್ಯಾರಶ್ಮಿಗೆ ಒಟ್ಟು 16 ಪ್ರಶಸ್ತಿಗಳ ಗರಿ ದೊರಕಿದೆ.
ಕಿರಿಯರ ವಿಭಾಗದಲ್ಲಿ 4ನೆ ತರಗತಿಯ ಅನ್ವಿತ್ ಬಿ. ಕೆ. ಕ್ಲೇ ಮಾಡೆಲಿಂಗ್ ನಲ್ಲಿ ಪ್ರಥಮ, 3ನೆ ತರಗತಿಯ ಮುಹಮ್ಮದ್ ಜಾಸಿಂ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, 4ನೆ ತರಗತಿಯ ಪ್ರಣವ್ ಕೆ. ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ, 4ನೆ ತರಗತಿಯ ಫಾತಿಮತ್ ತನಿಶಾ ಅರೇಬಿಕ್ ಪಠಣದಲ್ಲಿ ಪ್ರಥಮ, 1ನೆ ತರಗತಿಯ ತನಯ್ ಡಿ. ಕೆ. ಛದ್ಮವೇಷದಲ್ಲಿ ಪ್ರಥಮ, 4ನೆ ತರಗತಿಯ ನಿನಾದ್ ವೈ. ಆರ್. ಕನ್ನಡ ಕಂಠ ಪಾಠದಲ್ಲಿ ದ್ವಿತೀಯ, 4ನೆ ತರಗತಿಯ ಶ್ವೇಪಾಲಿ ಜೈನ್ ಬಿ. ಕಥೆ ಹೇಳುವುದರಲ್ಲಿ ದ್ವಿತೀಯ ಸ್ಥಾನ ಪಡೆದರು. ಹಿರಿಯರ ವಿಭಾಗದಲ್ಲಿ 7ನೆ ತರಗತಿಯ ಆಯಿಷತ್ ಜಸ್ನಾ ಇಂಗ್ಲೀಷ್ ಕಂಠಪಾಠದಲ್ಲಿ ಪ್ರಥಮ, 7ನೆ ತರಗತಿಯ ಆದಂ ಶಾಝಿನ್ ಹಿಂದಿ ಕಂಠಪಾಠದಲ್ಲಿ ಪ್ರಥಮ, 7ನೆ ತರಗತಿಯ ಶಂತನು ಕೃಷ್ಣ ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ, 6ನೆ ತರಗತಿಯ ಹರ್ಷ ಎ. ಛದ್ಮವೇಷದಲ್ಲಿ ಪ್ರಥಮ, 7ನೆ ತರಗತಿಯ ಜಶ್ವಿತ್ ಕೆ. ಆಶು ಭಾಷಣದಲ್ಲಿ ಪ್ರಥಮ, 7ನೆ ತರಗತಿಯ ಮುಹಮ್ಮದ್ ಮುಫೀಝ್ ಕನ್ನಡ ಕಂಠಪಾಠ ಮತ್ತು ಅರೇಬಿಕ್ ಪಠಣದಲ್ಲಿ ದ್ವಿತೀಯ, 6ನೆ ತರಗತಿಯ ಕೃಪಾಲಿ ಎಸ್. ಡಿ. ಅಭಿನಯ ಗೀತೆಯಲ್ಲಿ ದ್ವಿತೀಯ, 7ನೆ ತರಗತಿಯ ಜಶ್ವಿತ್ ಕೆ. ಕ್ಲೇ ಮಾಡೆಲಿಂಗ್ ನಲ್ಲಿ ತೃತೀಯ ಸ್ಥಾನಗಳನ್ನು ಗಳಿಸಿಕೊಂಡರು. ಈ ಮೂಲಕ 10 ಪ್ರಥಮ, 5 ದ್ವಿತೀಯ ಮತ್ತು ಒಂದು ತೃತೀಯ ಸ್ಥಾನಗಳೊಂದಿಗೆ ಒಟ್ಟು 16 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ತಂಡವನ್ನು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮತ್ತು ಪ್ರಾಂಶುಪಾಲ ಸೀತಾರಾಮ ಕೇವಳ ಅಭಿನಂದಿಸಿದ್ದಾರೆ.