ಪುತ್ತೂರು: ಮೆಸ್ಕಾಂ ಬಳಕೆದಾರರ ತುರ್ತು ಸಭೆ ಕೌಡಿಚ್ಚಾರಿನಲ್ಲಿ ನಡೆಯಿತು.
ಬಳಕೆದಾರರ ಅಧ್ಯಕ್ಷ ಎಸ್.ಅಬೂಬಕ್ಕರ್ ಕೌಡಿಚ್ಚಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೌಡಿಚ್ಚಾರಿನಲ್ಲಿ ನಾಲ್ಕೈದು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಗ್ರಾಪಂನ ಕುಡಿಯುವ ನೀರನ್ನು ನಂಬಿದವರಿಗೆ ಸಮಸ್ಯೆ ಉಂಟಾಗಿದೆ. ಅಂಗಡಿ ವ್ಯಾಪಾರ ನಡೆಸುವವರಿಗೂ ವಿದ್ಯುತ್ ವ್ಯತ್ಯಯದಿಂದ ಸಮಸ್ಯೆ ಉಂಟಾಗಿದೆ. ಕೌಡಿಚ್ಚಾರು ಪ್ರದೇಶದವರು ಕತ್ತಲಲ್ಲಿ ಕಾಲಕಳೆಯುವಂತಾಗಬಾರದು ಎಂದು ಸಭೆಯಲ್ಲಿ ವಿದ್ಯುತ್ ಬಳಕೆದಾರರು ಆಗ್ರಹಿಸಿದರು.
ಕೌಡಿಚ್ಚಾರ್ ಪ್ರದೇಶಕ್ಕೆ ಒಂದು ಟಿಸಿ ಅಳವಡಿಸುವಂತೆ ಹಾಗೂ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ನೀವುದಾಗಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಬಳಕೆದಾರರ ಕಾರ್ಯದರ್ಶಿ ದೊರೆಸ್ವಾಮಿ ಕೌಡಿಚ್ಚಾರು, ಇಕ್ಬಾಲ್ ಹುಸೈನ್, ಯಾಕೂಬ್ ಕೌಡಿಚ್ಚಾರು, ಹರೀಶ್, ಶರೀಫ್ ಜಾರತ್ತಾರು, ವನತರಾಜ್, ರಘುನಾಥ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.