ಪುತ್ತೂರು: ನರಿಮೊಗರು ಹನುಮಾನ್ ಫ್ರೆಂಡ್ಸ್ ಆಶ್ರಯದಲ್ಲಿ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ 3ನೇ ವರ್ಷದ ಮ್ಯಾಟ್ ಅಂಕಣದ ಪುರುಷರ 55 ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ ‘ದೀಪಾವಳಿ ಟ್ರೋಫಿ-2023’ ನ.4 ಶನಿವಾರ ರಾತ್ರಿ 8 ಗಂಟೆಗೆ ನರಿಮೊಗರು ಶಾಲಾ ಮೈದಾನದಲ್ಲಿ ನಡೆಯಲಿದೆ.
ರಾತ್ರಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸುವರು. ಹಿಂದೂ ಮುಖಂಡ ಕಿಶೋರ್ ಕುಮಾರ್ ಬೊಟ್ಯಾಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನರಿಮೊಗರು ಹನುಮಾನ್ ಫ್ರೆಂಡ್ಸ್ ಗೌರವಾಧ್ಯಕ್ಷ ಮಹಾಲಿಂಗ ನಾಯ್ಕ, ನರಿಮೊಗರು ಗ್ರಾಪಂ ಅಧ್ಯಕ್ಷೆ ಹರಿಣಿ, ಮುಂಡೂರು ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ. ಸರ್ವೆದೋಳಗುತ್ತು, ನರಿಮೊಗರು ಗ್ರಾಪಂ ಸದಸ್ಯ ಪುರಂದರ ಬಂಗೇರ ಒತ್ತಮುಂಡೂರು, ಮಾಜಿ ತಾಪಂ ಸದಸ್ಯ ಪರಮೇಶ್ವರ ಭಂಡಾರಿ, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಪಾಪೆತ್ತಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಂಬಾಳಿ, ಸುವರ್ಣ ಎಸ್ಟೇಟ್ ನ ವೇದನಾಥ ಸುವರ್ಣ, ಮುಂಡೂರು ಗ್ರಾಪಂ ಮಾಜಿ ಸದಸ್ಯ ಬಿ.ಟಿ.ಮಹೇಶ್ಚಂದ್ರ ಸಾಲಿಯಾನ್, ಮಾಜಿ ಸೈನಿಕ ಶಿವಾನಂದ, ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣರಾಜ್ ಜೈನ್, ಪ್ರಗತಿಪರ ಕೃಷಿಕ ಶರತ್‍ಚಂದ್ರ ಬೈಪಾಡಿತ್ತಾಯ, ದ.ಕ.ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ಕಿ ಶೆಟ್ಟಿ ಮಾಣಿ, ಕಂಪನಿಯಾ ನೆಮ್ಮದಿ ವೆಲ್‍ನೆಸ್ ಸೆಂಟರ್ ನ ಪ್ರಭಾಕರ ಸಾಲಿಯಾನ್, ಪ್ರಗತಿಪರ ಕೃಷಿಕ ಗಣೇಶ್ ಸಾಲಿಯಾನ್, ಉದ್ಯಮಿ ಹರೀಶ್ ಎಮ್.ಕೆ. ಕೈಪಂಗಳ, ಲೋಕೋಪಯೋಗಿ ಗುತ್ತಿಗೆದಾರ ವಸಂತ್ ಕಲ್ಲರ್ಪೆ, ನಿವೃತ್ತ ಟ್ಯಾಕ್ಸ್ ಆಫೀಸರ್ ಕೃಷ್ಣಪ್ಪ ಪೂಜಾರಿ ಕೈಂದಾಡಿ, ಉದ್ಯಮಿ ಗುರು ಮಣಿಯ, ಪ್ರಗತಿಪರ ಕೃಷಿಕ ಬಾಲಕೃಷ್ಣ ರೈ ಮರತ್ತಡ್ಕ, ಕರೆಮನೆ ಮಹಾಲಿಂಗೇಶ್ವರ ನಿತ್ಯೋದಯ ಯುವಕ ಮಂಡಲ ಅಧ್ಯಕ್ಷ ನವೀನ್ ರೈ ಮರತ್ತಡ್ಕ, ಉದ್ಯಮಿ ಹಾರಿಸ್ ನರಿಮೊಗರು ಪಾಲ್ಗೊಳ್ಳಲಿದ್ದಾರೆ.
ಪಂದ್ಯಾಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ನಗದು ಬಹುಮಾನದ ಜತೆ ದೀಪಾವಳಿ ಟ್ರೋಫಿ ನೀಡಲಾಗುವುದು. ಅಲ್ಲದೆ ಸವ್ಯಸಾಚಿ, ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ವೈಯಕ್ತಿಯ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಹನುಮಾನ್ ಫ್ರೆಂಡ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.