ಪುತ್ತೂರು: ನಗರ ಕಾಂಗ್ರೆಸ್ ವತಿಯಿಂದ ದಿವಂಗತ ಶಕ್ತಿಸಿನ್ಹ ರವರಿಗೆ ಶ್ರದ್ಧಾಂಜಲಿ ಸಭೆ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, 2007 ರ ಪುರಸಭಾ ಚುನಾವಣೆಯಲ್ಲಿ ಬಹಳ ಒತ್ತಾಯದಿಂದ ಶಕ್ತಿಸಿನ್ಹ ರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದೆವು. ಆ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಶಕ್ತಿ ಸಿನ್ಹರವರು ಪುರಸಭಾ ಸದಸ್ಯರಾದರು. ಆ ಬಳಿಕ ಮೂರು ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾಗಿ ನೆಲ್ಲಿಕಟ್ಟೆ ವಾರ್ಡ್ ನ್ನು ಸಾಕಷ್ಟು ಅಭಿವೃದ್ಧಿ ಪಡಿಸಿರುತ್ತಾರೆ, ಶಕ್ತಿ ಸಿನ್ಹರವರು ತನ್ನ ವಾರ್ಡಿನ ಜನರ ನಿರೀಕ್ಷೆಗೆ ಮೀರಿ ಕೆಲಸ ಮಾಡಿರುತ್ತಾರೆ. ಬಡವರಿಗೆ ತನ್ನ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದ ಶಕ್ತಿಸಿನ್ಹರವರು ನನ್ನ ಬಹಳಷ್ಟು ಆತ್ಮೀಯರಾಗಿದ್ದರು, ರಾಜಕೀಯವಾಗಿ ನನ್ನ ಪ್ರಬಲ ಬೆಂಬಲಿಗರಾಗಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಮಾತನಾಡಿ, ಶ್ವಾನ ಪ್ರೇಮ ಹೊಂದಿದ್ದ ಅವರು, ಶ್ವಾನವನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಿದ್ದರು. ಅವರನ್ನು ನಾವು ಕಳೆದು ಕೊಂಡಿರುವುದು ನಮಗೆಲ್ಲ ದುಃಖ ತಂದಿರುತ್ತದೆ ಎಂದು ಹೇಳಿದರು,
ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ,ಮಾಜಿ ನಗರ ಸಭಾ ಸದಸ್ಯ ಮುಕೇಶ್ ಕೆಮ್ಮಿಂಜೆ, ದಾಮೋದರ ಭಂಡಾರ್ಕರ್ ಶಕ್ತಿಸಿನ್ಹರ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಶಕ್ತಿಸಿನ್ಹ ಹಾಗೂ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಗಂಗಾಧರ ನಾಯ್ಕ್ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಬ್ಲಾಕ್ ಕಾರ್ಯದರ್ಶಿ ರೋಷನ್ ರೈ ಬನ್ನೂರು, ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಮಂಜುನಾಥ್ ಕೆಮ್ಮಾಯಿ, ಸುರೇಶ್ ಪೂಜಾರಿ ಮೊಟ್ಟೆತಡ್ಕ,, ವಿಕ್ಟರ್ ಪಾಯ್ಸ್, ವಾಲ್ಟರ್ ಸಿಕ್ವೆರಾ, ಇಸ್ಮಾಯಿಲ್ ಬೊಳ್ವಾರು,ಬ್ಲಾ ಕ್ ಎಸ್ ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ, ನಗರ ಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್, ಮಾಜಿ ಸದಸ್ಯೆ ಉಷಾಧನಂಜಯ, ನಗರಸಭಾ ಸದಸ್ಯರಾದ ಶೈಲಾ ಪೈ, ರೋಬಿನ್ ತಾವ್ರೊ, ಮುಂತಾದವರು ಉಪಸ್ಥಿತರಿದ್ದರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ ಸ್ವಾಗತಿಸಿದರು.