ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ಕ್ಷೇತ್ರಕ್ಕೆ ತರಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಬಿಡುಗಡೆಯಾದ ಅನುದಾನಗಳ ವಿವರ ಇಂತಿದೆ :
ಪುತ್ತೂರು ತಾಲೂಕು ಪಾಣಾಜೆ ಗ್ರಾಮದ ಕಡಂದೇಲು ಪ.ಜಾತಿ ಕಾಲನಿ ರಸ್ತೆ ಅಭಿವೃದ್ಧಿಗೆ ರೂ 24 ಲಕ್ಷ ರೂ., ಕೆದಿಲ ಗ್ರಾಮದ ಭಗವಂತಕೋಡಿ ಮುರುರ ಪಾಟ್ರುಕೋಡಿ 17 ಲಕ್ಷ ರೂ., ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಕಣಿಯಾರು ಪ.ಜಾತಿ ಕಾಲನಿ ರಸ್ತೆ ಕಾಂಕ್ರಿಟೀಕರಣಕ್ಕೆ 8 ಲಕ್ಷ ರೂ., ಬೈಲೋಡಿ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣಕ್ಕೆ 6 ಲಕ್ಷ ರೂ., ಕೆದಂಬಾಡಿ ಗ್ರಾಮದ ನಿಡ್ಯಾಣ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣಕ್ಕೆ 10 ಲಕ್ಷ ರೂ., ಬಲ್ನಾಡು ಗ್ರಾಮದ ಸಾರ್ಯ ಕೋಡಿಯಡ್ಕ ಪ.ಜಾತಿ ಕಾಲನಿ ರಸ್ತೆ ಕಾಂಕ್ರೀಟೀಕರಣಕ್ಕೆ 10 ಲಕ್ಷ ರೂ., ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿ ರಸ್ತೆಗೆ 15 ಲಕ್ಷ ರೂ., ಬಂಟ್ವಾಳ ತಾಲೂಕು ಬಿಳಿಯಾರು ಗ್ರಾಮದ ಪೆಜಿಕುಡೆಗುಂಡಿ ರಸ್ತೆಗೆ 10 ಲಕ್ಷ ರೂ., ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ಕ್ಷೇತ್ರದ ರಸ್ತೆಗೆ 15 ಲಕ್ಷ ರೂ., 34-ನೆಕ್ಕಿಲಾಡಿ ದರ್ಬೆ ಕಟ್ಟೆಯ ಬಳಿ ಇರುವ ರಸ್ತೆ ಕಾಂಕ್ರೀಟಿಕರಣಕ್ಕೆ 5 ಲಕ್ಷ ರೂ., ಕೊಡಿಂಬಾಡಿ ಗ್ರಾಮದ ಕಲ್ಪನೆ-ಪಿಲಿಗುಂಡ ರಸ್ತೆಗೆ 10 ಲಕ್ಷ ರೂ., ದಾರಂದ ಕುಕ್ಕು -ಬದಿನಾರು ರಸ್ತೆಗೆ 10 ಲಕ್ಷ ರೂ., ಬೆಳ್ಳಿಪಾಡಿ ಗ್ರಾಮದ ಕಠಾರ ಕೊಡಿಮಾರ ರಸ್ತೆ 10 ಲಕ್ಷ ರೂ., ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಪಾಲೆದ ಕೋಡಿ ಕೂಡ್ಲೆ ರಸ್ತೆ 10 ಲಕ್ಷ ರೂ. ಹಾಗೂ ಕೊಡಿಂಬಾಡಿ ಗ್ರಾಮದ-ಕಜೆ-ಬೆಳ್ಳಿಪ್ಪಾಡಿ ರಸ್ತೆಗೆ 10 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ.