ಪುತ್ತೂರು: ನೈಋತ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ. 6 ಕೊನೆ ದಿನವಾಗಿರುತ್ತದೆ. ಪ್ರತಿ ಚುನಾವಣೆ ಸಂದರ್ಭದಲ್ಲಿಯೂ ಅರ್ಹರು ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಪದವೀಧರರು ನೋಂದಣಿಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುವ ಕಾರ್ಯವಾಗಬೇಕಾಗಿದೆ ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು.
ಅವರು ಶನಿವಾರ ಸಂಜೆ ಮತದಾರರ ಪಟ್ಟಿ ತಯಾರಿಕೆಯ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.
2017ರ ಚುನಾವಣೆ ಸಂದರ್ಭ 506 ಶಿಕ್ಷಕರು ಹಾಗೂ 1138 ಮಂದಿ ಪದವೀದರರಿದ್ದರು. ಸದ್ಯ 103 ಶಿಕ್ಷಕರು ಹಾಗೂ 50 ಪದವೀಧರರು ಮಾತ್ರ ನೋಂದಾವಣಿ ಮಾಡಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ವಿವಿಧ ಕಡೆಗಳಲ್ಲಿ ನೋಂದಣಿ ಶಿಬಿರಗಳನ್ನು ಮಾಡಲಾಗುತ್ತಿದ್ದು, ಅ. 26ಕ್ಕೆ ವಿವೇಕಾನಂದ ಕಾಲೇಜಿನಲ್ಲಿ ಶಿಬಿರ ನಡೆಯಲಿದೆ. ಬಳಿಕ ಎರಡು ಶಿಬಿರಗಳನ್ನು ನಡೆಸಲಾಗುವುದು ಎಂದ ಅವರು, ಶಿಕ್ಷಣ ಇಲಾಖೆಯ ಮೂಲಕವೂ ನೋಂದಣಿ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪುತ್ತೂರು ತಹಸೀಲ್ದಾರ್ ಶಿವಶಂಕರ, ಉಪತಹಶೀಲ್ದಾರ್ ಸುಲೋಚನಾ ಪಿ.ಕೆ., ಶಿಕ್ಷಣ ಇಲಾಖೆಯ ಇಸಿಓ ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.