ಪುತ್ತೂರು: ಇಲ್ಲಿನ ನೆಹರೂನಗರದ ಕಾಡು ಬಯಲು ರಂಗಮಂದಿರದಲ್ಲಿ ಜ. 8, 9, 10ರಂದು ನೀನಾಸಂ ತಂಡದ ಇಫಿಜೀನಿಯಾ, ಮುಕ್ತಧಾರಾ ಹಾಗೂ ಏಕವ್ಯಕ್ತಿ ನಾಟಕ ಲೀಕ್ ಔಟ್ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾಡು ಬಯಲು ರಂಗಮಂದಿರದ ನಿರ್ದೇಶಕ ರಾಘವೇಂದ್ರ ಎಚ್.ಎಂ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡು ಬಯಲುರಂಗಮಂದಿರದಲ್ಲಿ ಪ್ರತಿ ವರ್ಷ ನಿರಂತರವಾಗಿ ರಂಗ ಚಟುವಟಿಕೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನೀನಾಸಂ ನಾಟಕ ಕಳೆದ 30 ವರ್ಷಗಳಿಂದ ಕಾಡು ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕೋವಿಡ್ ಕಾರಣಗಳಿಂದ ಕಳೆದ 2 ವರ್ಷ ನಾಟಕ ಪ್ರದರ್ಶನ ನಡೆದಿರಲಿಲ್ಲ. ಶುದ್ಧ ಕಲಾ ಪ್ರಾಕಾರಗಳ ಬದ್ದತೆಯೊಂದಿಗೆ ತನ್ನನ್ನು ತಾನು ತೊಡಗಿಸಿಕೊಂಡಿರುವ ನೀನಾಸಂ ತಂಡದ ನಾಟಕ ಗ್ರೀಕ್ ಕಮಿ ಯೂರಿಫಡಿಸ್ ರಚನೆಯ ಮಾದವ ಚಿಪ್ಪಳ್ಳಿ ಕನ್ನಡಕ್ಕೆ ಅನುವಾದಿಸಿದ ಬಿ.ಎನ್.ವೆಂಕಟರಮಣ ಐತಾಳ ನಿರ್ದೇಶನದ ಇಫಿಜೀನಿಯಾ ನಾಟಕವು ಜ.೮ರಂದು ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು. ರವೀಂದ್ರನಾಥ ಟಾಗೋರ್ ರಚಿಸಿದ ಅಹೋಬಲ ಶಂಕರ ಕನ್ನಡಕ್ಕೆ ಅನುವಾದಿಸಿದ ಪ್ರವೀಣ್ ಕುಮಾರ್ ಎಡಮಂಗಲ ನಿರ್ದೇಶನದ
ಮುಕ್ತದಾರಾ’ ನಾಟಕ ಜ. 9 ರಂದು ಪ್ರದರ್ಶನಗೊಳ್ಳಲಿದೆ.
ಚಲನಚಿತ್ರ ನಟಿ ಹಾಗೂ ರಂಗಭೂಮಿ ಕಲಾವಿದೆ ದಿ ಚಾನೆಲ್ ಥಿಯೇಟರ್ ಪಾಂಡವಪುರ ಅದರ ಸಂಚಾಲಕಿ ಅಕ್ಷತಾ ಪಾಂಡವಪುರ ಅವರಿಂದ `ಲೀಕ್ ಔಟ್’ ಏಕವ್ಯಕ್ತಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾಡು ಬಯಲು ರಂಗ ಮಂದಿರದ ವೀಣಾ ರಾಘವೇಂದ್ರ ಮತ್ತು ಪ್ರವೀಣ್ ವರ್ಣಕುಟೀರ ಉಪಸ್ಥಿತರಿದ್ದರು.