- ಏರುಮುಖದೊಂದಿಗೆ ರೈತರಲ್ಲಿ ಖುಷಿ ಮೂಡಿಸಿದ ರಬ್ಬರ್!
ಪುತ್ತೂರು: ಏರಿಕೆ ಹಾದಿಯಲ್ಲಿ ಕ್ರಮಿಸುತ್ತಿರುವ ರಬ್ಬರ್ ಧಾರಣೆ, ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಬಹುದೇ ಎನ್ನುವ ಕುತೂಹಲ ಸಹಜವಾಗಿಯೇ ಮೂಡಿದೆ. ರಬ್ಬರ್ ಆರ್.ಎಸ್.ಎಸ್.4 ಗ್ರೇಡ್ 150ರ ಗಡಿ ತಲುಪಿದ್ದು, ಉಳಿದ ಗ್ರೇಡ್’ಗಳು ಹಿಂದೆಯೇ ಇವೆ.
ಗುರುವಾರ ಹೊಸ ಅಡಿಕೆ 325- 365 ರೂ., ಹಳೆ ಅಡಿಕೆ 380 -422 ರೂ. ಹಾಗೂ 423-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 460 ರೂ. ಹಾಗೂ 460- 485 ರೂ. (ಗುಣಮಟ್ಟ)ನಲ್ಲಿದೆ.
ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ., ಕೊಬ್ಬರಿ 70-83 ರೂ.ನಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.
ಏರಿಕೆ ಹಾದಿಯಲ್ಲಿರುವ ರಬ್ಬರ್ ಆರ್.ಎಸ್.ಎಸ್4 150.00 ರೂ., ಆರ್.ಎಸ್.ಎಸ್ 5 140.00 ರೂ., ಲಾಟ್ 132.50 ರೂ., ಸ್ಕ್ರಾಪ್ 81.50 ರಿಂದ 91.50 ರೂ.ನಲ್ಲಿದೆ.
ಬುಧವಾರ ರಬ್ಬರ್ ಆರ್.ಎಸ್.ಎಸ್4 149.50 ರೂ., ಆರ್.ಎಸ್.ಎಸ್ 5 139.50 ರೂ., ಲಾಟ್ 131.50 ರೂ., ಸ್ಕ್ರಾಪ್ 80.00 ರಿಂದ 90.00 ರೂ.ನಲ್ಲಿತ್ತು.