ಪುತ್ತೂರು: ಮೂಡಬಿದಿರೆ ಹಾಗೂ ಮಂಗಳೂರು ತಾಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಟ್ಟಿರುವುದು ಜಿಲ್ಲೆಯ ರೈತರು ಹಾಗೂ ಸಮಸ್ತ ನಾಗರಿಕರಿಗೆ ಮಾಡಿದ ದ್ರೋಹ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ, ದಕ್ಷಿಣ ಕನ್ನಡ, ಮಂಗಳೂರಿಗೆ ನೀರುಣಿಸುವ ನೇತ್ರಾವತಿಯನ್ನೇ ತಿರುಗಿಸಿ ಎತ್ತಿನಹೊಳೆ ಯೋಜನೆಯನ್ನು ಮಾಡಿ ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಗಾಲ ಪ್ರದೇಶವನ್ನಾಗಿ ಮಾಡಲು ಸಂಚು ರೂಪಿಸಲಾಗಿದೆ. ಇದೀಗ ಬರಗಾಲ ಪೀಡಿತ ಪ್ರದೇಶದಿಂದ ದ.ಕ.ಜಿಲ್ಲೆಯನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.
ತಕ್ಷಣ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ದ.ಕ.ಜಿಲ್ಲೆಯ ರೈತರಿಗೆ, ಕಾರ್ಮಿಕರಿಗೆ, ಬಡಜನರಿಗೆ ನ್ಯಾಯೋಚಿತವಾಗಿ ಪರಿಹಾರ ಒದಗಿಸಬೇಕು ಎಂದು ಸರಕಾರವನ್ನು ಅವರು ಒತ್ತಾಯಿಸಿದ್ದಾರೆ.