14-10-2023ರ ಕೃಷಿ ಮಾರುಕಟ್ಟೆ ಧಾರಣೆ

  • ವಾರಾಂತ್ಯಕ್ಕೆ ಕೊಬ್ಬರಿ ಧಾರಣೆ ಏರಿಕೆ

ಪುತ್ತೂರು: ಶನಿವಾರ ಮಾರುಕಟ್ಟೆ ಧಾರಣೆಯಲ್ಲಿ ಅಡಿಕೆ ಯಥಾಪ್ರಕಾರ ಇಳಿಕೆ, ರಬ್ಬರ್ ಸಣ್ಣ ಮಟ್ಟಿನ ಏರಿಕೆ ದಾಖಲಿಸಿದೆ. ಇದರ ನಡುವೆ ಕೊಬ್ಬರಿ ಧಾರಣೆ 10 ರೂ. ಏರಿಕೆ ಕಂಡಿದ್ದು, ರೈತರ ನಗುವಿಗೆ ಕಾರಣವಾಗಿದೆ.

ಹೊಸಅಡಿಕೆ 325- 365 ರೂ., ಹಳೆ ಅಡಿಕೆ 380 -420 ರೂ. ಹಾಗೂ 420-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 462 ರೂ. ಹಾಗೂ 463- 485 ರೂ. (ಗುಣಮಟ್ಟ)ನಲ್ಲಿದೆ.

ಶುಕ್ರವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 380 -425 ರೂ. ಹಾಗೂ 425-430 ರೂ.ನಲ್ಲಿತ್ತು (ಗುಣಮಟ್ಟ). ಡಬ್ಬಲ್ ಚೋಲ್ 390 – 468 ರೂ. ಹಾಗೂ 469- 485 ರೂ. (ಗುಣಮಟ್ಟ)ನಲ್ಲಿತ್ತು.



































 
 

ಕಾಳು ಮೆಣಸು ಕೆ.ಜಿ.ಗೆ 315 – 585 ರೂ., ಒಣ ಕೊಕ್ಕೊ 215- 235 ರೂ., ಹಸಿ ಕೊಕ್ಕೊ 53- 58 ರೂ.ನಲ್ಲಿ ಖರೀದಿ ನಡೆಸುತ್ತಿದೆ. ಕೊಬ್ಬರಿ 10 ರೂ. ಧಾರಣೆ ಏರಿಸಿಕೊಂಡಿದ್ದು 70-83 ರೂ. ದಾಖಲಿಸಿದೆ.

ಶನಿವಾರ ರಬ್ಬರ್ ಆರ್.ಎಸ್.ಎಸ್4 146.50 ರೂ., ಆರ್.ಎಸ್.ಎಸ್ 5 137.50 ರೂ., ಲಾಟ್ 128.50 ರೂ., ಸ್ಕ್ರಾಪ್ 76.00 ರಿಂದ 86.00 ರೂ.ನಲ್ಲಿದೆ. ಶುಕ್ರವಾರ ರಬ್ಬರ್ ಆರ್.ಎಸ್.ಎಸ್4 146.00 ರೂ., ಆರ್.ಎಸ್.ಎಸ್ 5 137.00 ರೂ., ಲಾಟ್ 128.50 ರೂ., ಸ್ಕ್ರಾಪ್ 76.00 ರಿಂದ 86.00 ರೂ.ನಲ್ಲಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top