ಪುತ್ತೂರು: ರೈಲು ಖಾಸಗೀಕರಣದ ವಿರುದ್ದ ಅಖಿಲ ಭಾರತ ಜಂಟಿ ಕಿಸಾನ್ ಮೋರ್ಚಾ, ಸಿಐಟಿಯು, ಜೆಸಿಟಿಯು ವತಿಯಿಂದ ನ. 3ರಂದು ಪುತ್ತೂರು ರೈಲು ನಿಲ್ದಾಣ ಎದುರು ಪ್ರತಿಭಟನೆ ನಡೆಯಲಿದೆ.
ಕೇಂದ್ರದ ನರೇಂದ್ರ ಮೋದಿ ಸರಕಾರ ಮಾಡಲುದ್ದೇಶಿಸಿದ ರೈಲು ಖಾಸಗೀಕರಣವನ್ನು ತಡೆಯವುದು ಭಾರತೀಯರಾದ ನಮ್ಮೆಲ್ಲರ ಪ್ರಥಮ ಕರ್ತವ್ಯ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ. ಭಟ್ ಹೇಳಿದ್ದಾರೆ.
ವಂದೇ ಮಾತರಂ ಅತಿ ವೇಗದ ರೈಲು ಈಗ ತಿರುವನಂತಪುರದಿಂದ ಕಾಸರಗೋಡು ತನಕ ಸಂಚರಿಸುತ್ತಿದೆ ಇದನ್ನು ಮುಂದುವರಿಸಿ ಮಂಗಳೂರು ತನಕ ವಿಸ್ತರಿಸಬೇಕು. ಮಂಗಳೂರಿನ ಜನತೆಗೂ ಇದರ ಸದುಪಯೋಗ ಸಿಗುವಂತೆ ಮಾಡಲು ಕೂಡ ನಾವು ಸರಕಾರವನ್ನು ಆಗ್ರಹಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.