ಕೊಣಾಜೆ: ಕೊಣಾಜೆ ಸಮೀಪದ ನಡುಪದವಿನ ಪರಿಸರದಲ್ಲಿ ಗುರುವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷಗೊಂಡ ಬಗ್ಗೆ ವರದಿಯಾಗಿದ್ದು, ಈ ಭಾಗದ ನಾಗರಿಕರು ಆತಂಕಗೊಂಡಿದ್ದಾರೆ.
ನಡುಪದವು ಮಸೀದಿ ಸಮೀಪ ಚಿರತೆಯೊಂದು ರಸ್ತೆಯ ಒಂದು ಬದಿಯಿಂದ ಮತ್ತೊಂದು ಭಾಗಕ್ಕೆ ಜಿಗಿದು ಓಡಿರುವುದನ್ನು ಆಸೀಫ್ ಎನ್ನುವವರು ನೋಡಿದ್ದು ಬಳಿಕ ಪರಿಸರದವರಲ್ಲಿ ತಿಳಿಸಿದ್ದರು. ನಂತರ ಸುಮಾರು 9.30ರ ವೇಳೆಗೆ ನಡುಪದವು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕಾಲೇಜೊಂದರ ಪ್ರಾಧ್ಯಾಪಕ ಚೇತನ್ ಎನ್ನುವವರು ಊಟ ಮುಗಿಸಿ ವಾಕಿಂಗ್ ಹೋಗುತ್ತಿದ್ದ ವೇಳೆ ಇಲ್ಲೇ ಸಮೀಪದ ರಸ್ತೆಯಲ್ಲಿ ಸ್ಕೂಟರೊಂದು ಬರುತ್ತಿದ್ದಾಗ ಅದರ ಎದುರಿನಲ್ಲೇ ಚಿರತೆ ರಸ್ತೆ ದಾಟಿ ಓಡಿ ಹೋಗಿರುವುದನ್ನು ನೋಡಿ ಭಯಬೀತರಾಗಿದ್ದರು. ಬಳಿಕ ಮನೆಗೆ ವಾಪಸ್ಸು ಬಂದು ಸಮೀಪದ ಮನೆಯವರಿಗೆ ವಿಷಯ ತಿಳಿಸಿದ್ದರು.
ಒಂದೇ ದಿನ ರಾತ್ರಿ ಇಬ್ಬರು ವ್ಯಕ್ತಿಗಳು ಚಿರತೆಯನ್ನು ನೋಡಿದ್ದಾರೆ. ಇದೀಗ ಪರಿಸರದ ನಾಗರಿಕರು ಆತಂಕದಲ್ಲಿದ್ದಾರೆ.