ಶಿರಸಿ: ಗೃಹಿಣಿಗೆ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಸ್ಥಾನದ ಹಿತರಕ್ಷಣಾ ವೇದಿಕೆ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಅವರನ್ನು ಗುರುವಾರ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.
ನ್ಯಾಯಾಲಯದ ಆದೇಶ ಪಡೆದುಕೊಂಡ ಪೊಲೀಸರು, ಶಿರಸಿ ಅಲೇಖಾ ಗೇಟ್ ವೇ ಲಾಡ್ಜ್’ಗೆ ಕರೆದೊಯ್ದು ಪರಿಶೀಲನೆ ನಡೆಸಲಾಯಿತು.
ಆರ್ಕೆಸ್ಟ್ರಾದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ವಿವಾಹಿತ ಮಹಿಳೆಯನ್ನು ಲಾಡ್ಜ್’ಗೆ ಕರೆಸಿಕೊಂಡು ಬಲಾತ್ಕಾರ ಮಾಡಿದ್ದ ಎಂದು ದೂರಲಾಗಿದೆ. ಬಳಿಕ ಬ್ಲ್ಯಾಕ್ ಮೇಲ್ ಮಾಡಿ, ಹಣ ಕೀಳಲು ಯತ್ನಿಸಿದ್ದ ಎಂದು ಕಾರವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದಲ್ಲಿ ಪ್ರಶಾಂತ್ ಭಟ್ ಮಾಣಿಲ ಬಂಧಿತನಾಗಿದ್ದು, ಕಾರವಾರ ಜೈಲಿನಲ್ಲಿ ಹಾಕಲಾಗಿತ್ತು. ಇದೀಗ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಶಾಂತ್ ಭಟ್ ಮಾಣಿಲ ವಿರುದ್ಧ ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣಗಳು ಧಾಖಲಾಗಿವೆ ಎಂದು ಹೇಳಲಾಗಿದೆ.