ವಿಟ್ಲ: ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಅ. 2ರಂದು ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಇದೇ ಸಂದರ್ಭ ನವೀಕರಣಗೊಂಡ ಶಾಲಾ ಸಭಾ ವೇದಿಕೆಯ ಉದ್ಘಾಟನೆ ಹಾಗೂ ವರ್ಗಾವಣೆಗೊಂಡ ಶಿಕ್ಷಕ ಭುವನೇಶ್ವರ್ ಸಿ. ಅವರಿಗೆ ಸನ್ಮಾನ, ಬೀಳ್ಕೊಡುಗೆ ನಡೆಯಿತು.
ಕುಕ್ಕಾಜೆ ಶ್ರೀ ಕಾಳಿಕಾ ಅಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಮಾತನಾಡಿ, ಗುರುವೃಂದ ಹಾಗೂ ಪೋಷಕರ ಸಮರ್ಪಣಾ ಭಾವದಿಂದ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದರು.
ಹಿರಿಯ ಯಕ್ಷಗಾನ ಕಲಾವಿದ ಹರೀಶ್ ಬಳಂತಿಮೊಗರು ಮಾತನಾಡಿ, 15 ವರ್ಷಗಳ ಕಾಲ ಶಿಕ್ಷಕರಾಗಿ ಹಾಗೂ ಪ್ರಭಾರ ಮುಖ್ಯಗುರುಗಳಾಗಿದ್ದ ಭುವನೇಶ್ವರ ಸಿ. ಮಡಗಾಂವಕರ್ ಅವರು ಅನುಪಮ ಸೇವೆ ಸಲ್ಲಿಸಿದ್ದಾರೆ. ಆಂಗ್ಲ ಭಾಷಾ ಶಿಕ್ಷಕರಾಗಿ ಅವರ ಬೋಧನಾ ಕೌಶಲ, ಸರಳ ಸಜ್ಜನಿಕೆ, ಶುದ್ಧ ಮನಸ್ಸಿನ ವ್ಯಕ್ತಿತ್ವ ಹಾಗೂ ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳಿಂದ ಅವರು ಪ್ರೀತಿ ಗೌರವಾದರ ಸಂಪಾದಿಸಿದ್ದಾರೆ ಎಂದರು.
ಮಾಣಿಲ ಗ್ರಾ.ಪಂ. ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ಅಧ್ಯಕ್ಷತೆ ವಹಿಸಿದ್ದರು. ನಡುಮನೆ ಮಹಾಬಲ ಭಟ್, ರಾಜೇಶ್ ಕುಮಾರ್ ಬಾಳೆಕಲ್ಲು, ನಿವೃತ್ತ ಮುಖ್ಯ ಗುರು ಸುಬ್ರಹ್ಮಣ್ಯ ಭಟ್ ಕೆ.ಜಿ., ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ಮಾತನಾಡಿದರು.
ನಿವೃತ್ತ ಶಿಕ್ಷಕ ಅನಂತ ಭಟ್ ಮುಜೂರು ಸನ್ಮಾನಿತರನ್ನು ಅಭಿನಂದಿಸಿದರು. ಸಹಶಿಕ್ಷಕ ಸುಧೀಶ್ ಕೆ. ದಿನದ ಮಹತ್ವ ವಿವರಿಸಿದರು. ಸಹಶಿಕ್ಷಕಿ ಕವಿತಾ ಕೆ. ಸನ್ಮಾನ ಪತ್ರ ವಾಚಿಸಿದರು.
ಎಸ್.ಡಿ.ಎಂ.ಸಿ. ಸದಸ್ಯ ವಿಷ್ಣು ಕನ್ನಡಗುಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾರ ಮುಖ್ಯಗುರು ಲತಾ ಯು. ಸ್ವಾಗತಿಸಿ, ಸಹಶಿಕ್ಷಕ ಸಂದೇಶ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು. ಮಮತಾ ರಾವ್ ಬಿ., ಸೀತಾಲಕ್ಷ್ಮಿ ಬಲ್ಲಾಳ್, ತನುಶ್ರೀ ಸಹಕರಿಸಿದರು.