ಉಪ್ಪಿನಂಗಡಿ: ರಸ್ತೆ ಬದಿ ತ್ಯಾಜ್ಯ ಎಸೆದು ಹೋಗಿದ್ದವನ್ನು ಪತ್ತೆಹಚ್ಚಿ, ದಂಡ ವಿಧಿಸಿದ ಘಟನೆ ಬೇರಿಕೆ ಎಂಬಲ್ಲಿ ನಡೆದಿದೆ.
ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿರುವ 34 ನೆಕ್ಕಿಲಾಡಿ ಗ್ರಾಪಂ, 5050 ರೂ. ದಂಡ ವಿಧಿಸಿದೆ. ಮನೆಯೊಂದರ ತ್ಯಾಜ್ಯವನ್ನು ಸಂಗ್ರಹಿಸಿ ತಂದು, ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದರು.
ಇಂತಹ ಘಟನೆ ಅಲ್ಲಲ್ಲಿ ನಡೆಯುತ್ತಿದ್ದು, ಸ್ಥಳೀಯಾಡಳಿತ ಅರಿವು ಕಾರ್ಯಕ್ರಮ ನಡೆಸುತ್ತಿದೆ. ಮಾತ್ರವಲ್ಲ, ತ್ಯಾಜ್ಯ ಎಸೆಯುವ ಬಗ್ಗೆ ಮಾಹಿತಿ ನೀಡಿ, ಇಂತಹ ತಪ್ಪು ಪುನರಾವರ್ತನೆ ಆಗದಂತೆ ತಿಳಿ ಹೇಳುವ ಕೆಲಸವನ್ನು ಮಾಡಿತ್ತು. ಆದರೂ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವ ಪ್ರಮಾಣ ಕಡಿಮೆಯಾಗುತ್ತಿಲ್ಲ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ದಂಡನೆ ವಿಧಿಸಲು ಸ್ಥಳೀಯಾಡಳಿತ ಮುಂದಾಗಿದೆ.