ಪುತ್ತೂರು: ನೆಲ್ಲಿಕಟ್ಟೆ ಮಿತ್ರಮಂಡಲ ಹಾಗೂ ನೆಲ್ಲಿಕಟ್ಟೆ ಈಶ ವಿದ್ಯಾಲಯದ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನ ಸೋಮವಾರ ನಡೆಯಿತು.
ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನದ ಪ್ರಯುಕ್ತ ನಡೆದ ಸ್ವಚ್ಛತಾ ಕಾರ್ಯ ನೆಲ್ಲಿಕಟ್ಟೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ರಸ್ತೆ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ, ನಾಗನ ಕಟ್ಟೆ, ನೆಲ್ಲಿಕಟ್ಟೆ ಬಳಿಯಲ್ಲಿ ನಡೆಯಿತು.
ನೆಲಿಕಟ್ಟೆ ಮಿತ್ರ ಮಂಡಲದ ಸ್ಥಾಪಕಾಧ್ಯಕ್ಷ ಜಗನ್ನಾಥ ರೈ ಸೂತ್ರಬೆಟ್ಟು ದೀಪ ಬೆಳಗಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೆಲ್ಲಿಕಟ್ಟೆ ಮಿತ್ರ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶಶಿಧರ್ ನೆಲ್ಲಿಕಟ್ಟೆ, ಬಾಲಕೃಷ್ಣ ನಾಯ್ಕ ನೆಲ್ಲಿಕಟ್ಟೆ, ದೇವಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಶೈಲೇಶ್ ನಾಯ್ಕ, ಸುರೇಶ್, ಬೆಳ್ಳಿಯಪ್ಪ ಪೂಜಾರಿ, ರೋಹಿತ್ ನೆಲ್ಲಿಕಟ್ಟೆ, ಸುರೇಶ್ ನಾಯ್ಕ ಸಾಮೆತ್ತಡ್ಕ, ನಗರಸಭಾ ಸದಸ್ಯ ಶಕ್ತಿ ಸಿನ್ಹ ನೆಲ್ಲಿಕಟ್ಟೆ, ರಾಜೇಶ್ ನಾಯ್ಕ ನೆಲ್ಲಿಕಟ್ಟೆ, ಈಶ ವಿದ್ಯಾಲಯದ ಪ್ರಾಂಶುಪಾಲ ಗೋಪಾಲಕೃಷ್ಣ ಈಶ, ಉಪನ್ಯಾಸಕರಾದ ಭಾಸ್ಕರ್ ಶೆಟ್ಟಿ, ಪೂರ್ಣಿಮಾ, ರಕ್ಷಾ, ನಿಧಿ, ಸ್ವಾತಿ, ಉಷಾ, ಕಲೈವಾಣಿ, ಉಷಾ ಕೈಸಾನ, ಅಶ್ವಿನಿ ಹಾಗೂ ಸಂಸ್ಥೆಯ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು.