ಪುತ್ತೂರು: ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ವತಿಯಿಂದ ಕೆ.ಎಂ.ಸಿ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರ ಅ.7 ಶನಿವಾರ ಟ್ರಸ್ಟ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಸಾಮಾನ್ಯ ರೋಗ, ಕಣ್ಣು, ಗ್ಯಾಸ್ಟ್ರೋಂಟಾರಲಾಜಿ, ಹೃದಯ ರೋಗ, ಎಲುಬು, ಕೀಲು ರೋಗ, ಮೂತ್ರಶಾಸ್ತ್ರ ವಿಭಾಗ ಚಿಕಿತ್ಸೆ ಲಭ್ಯವಿದೆ. ಅಲ್ಲದೆ ಬಿ.ಪಿ ಮತ್ತು ಮಧುಮೇಹ ತಪಾಸಣೆ, ಅಗತ್ಯ ಇರುವವರಿಗೆ ಇ.ಸಿ.ಜಿ ಪರೀಕ್ಷೆ, ಔಷಧ ವಿತರಣೆ, ಓದುವ ಕನ್ನಡಕ ವಿತರಣೆ ಉಚಿತವಾಗಿ ಲಭ್ಯವಿದೆ.
ಚಿಕಿತ್ಸೆ ಅಗತ್ಯವಿದ್ದಲ್ಲಿ ಕೆ.ಎಂ.ಸಿ ಆಸ್ಪತ್ರೆಯ ಹಸಿರು ಕಾರ್ಡ್ ನೀಡಲಾಗುತ್ತದೆ. ಕಾರ್ಡ್ ಪಡೆದುಕೊಂಡವರು ಒಂದು ತಿಂಗಳೊಳಗೆ ಆಸ್ಪತ್ರೆಗೆ ಹೋಗಬೇಕು. ಕಣ್ಣಿನ ಪೊರೆ ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ. ತಪಾಸಣೆ ಮಾಡುವವರು ಕಡ್ಡಾಯವಾಗಿ 12.30 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಆರ್.ಇ.ಬಿ ಎನ್ ಕ್ಲೇವ್ ಬೈಪಾಸ್ ರೋಡ್ ದರ್ಬೆ. ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ನ ಕಚೇರಿ ದರ್ಬೆ ಪುತ್ತೂರು ಮೊ: 8971462232 ಸಂಪರ್ಕಿಸಬಹುದು ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.