ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕುಲ್ಕುಂದ ಕುಮಾರಧಾರ ಹೋಂ ಸ್ಟೇ ರೆಸಾರ್ಟಿನಲ್ಲಿ ಜರಗಿತು.
ಮುಖ್ಯ ಅತಿಥಿಗಳಾಗಿದ್ದ ಲಯನ್ಸ್ ಜಿಲ್ಲಾ ಎಕ್ಸ್’ಟೆನ್ಷನ್ ಚೇಯರ್ಮೆನ್ ಜಯರಾಮ ದೇರಪ್ಪಜ್ಜನ ಮನೆ ಮಾತನಾಡಿ, ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯೇ ಒಂದು ದೊಡ್ಡ ಕುಟುಂಬ. ಈ ಕುಟುಂಬದಲ್ಲಿರುವ ಎಲ್ಲಾ ಲಯನ್ಸ್ ಸದಸ್ಯರು ಸೇವಾ ಮನೋಭಾವನೆಯನ್ನು ಹೊಂದಿದ್ದಾರೆ. ಅಶಕ್ತರಿಗೆ, ಅಗತ್ಯ ಉಳ್ಳವರಿಗೆ, ಬಡತನದಲ್ಲಿರುವವರಿಗೆ ಸಹಾಯ ಮಾಡುವುದೇ ನಮ್ಮ ಉದ್ದೇಶ. ಲಯನ್ಸ್ ಸಂಸ್ಥೆಯಲ್ಲಿ ಹಿಂದಿಗಿಂತಲೂ ಅಧಿಕ ಸದಸ್ಯರು ಸೇರ್ಪಡೆಯಾಗುತ್ತಾರೆ. ಸುಬ್ರಮಣ್ಯ ಲಯನ್ಸ್ ಕ್ಲಬ್ ತನ್ನದೇ ಆದಂತಹ ಸೇವಾ ಕಾರ್ಯ ಚಟುವಟಿಕೆಗಳೊಂದಿಗೆ ಇಂದು ಲಯನ್ಸ್ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ ಎಂದರು.
ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಪ್ರೊ.ಕೆ.ಆರ್. ಶೆಟ್ಟಿಗಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸದಸ್ಯರ ಕುಟುಂಬಸ್ಥರು ಹಾಜರಿದ್ದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತೀಶ ಕೂಜುಗೋಡು ಸ್ವಾಗತಿಸಿ, ಖಜಾಂಚಿ ಚಂದ್ರಶೇಖರ ಪಾನತ್ತಿಲ ವಂದಿಸಿದರು.