ಪುತ್ತೂರು: ಅ.22 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಪುತ್ತೂರು ವಿಜಯ ಸಾಮ್ರಾಟ್ ವತಿಯಿಂದ ನಡೆಯಲಿರುವ “ಪುತ್ತೂರುದ ಪಿಲಿಗೊಬ್ಬು-2023” ರ ಆಮಂತ್ರಣ ಪತ್ರಿಕೆ ಬಿಡುಗಡೆ ಗುರುವಾರ ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ.ನರಸಿಂಹ ಕಾನಾವು ಜಂಟಿಯಾಗಿ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ಹುಲಿವೇಷ ಕುಣಿತ, ಹಾಗೆಯೇ ಫುಡ್ ಫೆಸ್ಟ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದರು.
ಡಾ.ನರಸಿಂಹ ಕಾನಾವು ಮಾತನಾಡಿ, ನಮ್ಮ ಜಿಲ್ಲೆಯ ಹೆಮ್ಮೆಯ ಜಾನಪದ ಕಲೆ ಹುಲಿ ಕುಣಿತ ಕಾರ್ಯಕ್ರಮ ಎಲ್ಲರ ಮನ ಗೆಲ್ಲಲಿ ಎಂದರು.
ಕಾರ್ಯಕ್ರಮ ಸಂಘಟಕ ವಿಜಯ ಸಾಮ್ರಾಟ್ ನ ಸಹಜ್ ರೈ ಬೆಳಜ್ಜ ಮಾತನಾಡಿ, ದ.ಕ. ಜಿಲ್ಲೆಯ ಬಲಿಷ್ಠ ತಂಡಗಳ ಹುಲಿ ಕುಣಿತ ಕಾರ್ಯಕ್ರಮ ವಿನೂತನವಾಗಿ ಮೂಡಿಬರಲಿದೆ. ಈ ಹಿಂದೆ ವಿಜಯ ಸಾಮ್ರಾಟ್ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದೇವೆ. ಈ ನಿಟ್ಟಿನಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ “ಫುಡ್ ಫೆಸ್ಟ್” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅ.21 ರಂದು ಸಂಜೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ. ಪುತ್ತೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದ ಅವರು, ಎಲ್ಲರ ಸಹಕಾರ ಕೋರಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡ, ಜಾನಪದ, ದೈವೀಕಲೆಯಾಗಿರುವ ಹುಲಿಕುಣಿತ ವನ್ನು ಉಳಿಸುವ, ಬೆಳೆಸುವ ನಿಟ್ಟಿನಲ್ಲಿ ಆಯೋಜಸಿರುವ ಪಿಲಿಗೊಬ್ಬು ಕಾರ್ಯಕ್ರಮ ಶ್ಲಾಘನಿಯ ಎಂದರು.