ಪುತ್ತೂರು: ಪಿಲಿಏಸ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಹಿಂದಿನ ವರ್ಷ ಪಿಲಿಗೊಬ್ಬು ಎಂಬ ಹೆಸರಿನಲ್ಲಿ ಹೊಸ ಇತಿಹಾಸ ಬರೆದಿದ್ದು, ಸುಮಾರು 60 ಮಂದಿ ಹುಲಿ ವೇಷ ಹಾಕಿದ್ದರು. ಮಾತ್ರವಲ್ಲ ಬಿಗ್ ಬಾಸ್ ವೇದಿಕೆಯಲ್ಲೂ ಹೆಜ್ಜೆ ಹಾಕಿ, ರಾಜ್ಯದ ಜನತೆಗೆ ಕರಾವಳಿ ಸಂಸ್ಕೃತಿಯ ಸೊಗಡನ್ನು ಪರಿಚಯಿಸಿದ್ದರು. ಇದೀಗ ಮತ್ತೊಮ್ಮೆ ನವರಾತ್ರಿ ಹಬ್ಬ ಬಂದಿದ್ದು, ಕಲ್ಲೇಗ ಟೈಗರ್ಸ್ ವೇಷ ಹಾಕಲು ಸಿದ್ಧರಾಗಿದ್ದಾರೆ.
6ನೇ ವರ್ಷದ ಪಿಲಿಏಸ ಕಾರ್ಯಕ್ರಮದಲ್ಲಿ ಅ. 19ರಂದು ರಾತ್ರಿ ಊದು ಪೂಜೆ ನಡೆದು, ಅ. 20ರಂದು ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಹುಲಿ ಇಳಿಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಪುತ್ತೂರಿನ ಪೇಟೆಯಲ್ಲಿ `ಪಿಲಿಏಸ’ದ ರಂಗನ್ನು ಕಣ್ತುಂಬಿಕೊಳ್ಳಬಹುದು.