ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಭಕ್ತರ ಸಹಕಾರದೊಂದಿಗೆ ಈ ಬಾರಿ ನಡೆಯಲಿರುವ “ಪುತ್ತೂರು ಶಾರದೋತ್ಸವದ” ಶಾರದೆ ವಿಗ್ರಹ ರಚನೆಗೆ ಮುಹೂರ್ತ ಗುರುವಾರ ಪ್ರಭು ಸ್ಟುಡಿಯೋ ಮಾಲಕ ಶ್ರೀನಿವಾಸ ಪ್ರಭುರವರ ನಿವಾಸದ ಬಳಿ ನಡೆಯಿತು.
ಈ ಬಾರಿ ಶ್ರೀ ಶಾರದೆ ಪ್ರತಿಷ್ಠೆ, ಶೋಭಾಯಾತ್ರೆಯೊಂದಿಗೆ ಅದ್ದೂರಿಯಾಗಿ ನಡೆಯಲಿದ್ದು, ಸಮಿತಿ ಪದಾಧಿಕಾರಿಗಳು ಮಹಾಲಿಂಗೇಶ್ವರ ದೇವರ ಸನ್ನಿಧಿ ಹಾಗೂ ಶಾರದಾ ಭಜನಾ ಮಂದಿರದಲ್ಲಿ ಪ್ರಾರ್ಥಿಸಿ ಬಳಿಕ ಉಳ್ಳಾಲ್ತಿ ಕಟ್ಟೆ ಬಳಿ ಇರುವ ಶ್ರೀನಿವಾಸ ಪ್ರಭು ಅವರ ನಿವಾಸದಲ್ಲಿ ವಿಗ್ರಹ ಮುಹೂರ್ತ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿ ಗೋಪಾಲಕೃಷ್ಣ, ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ತಾರನಾಥ್ ಹೆಚ್, ಸುಧೀರ್, ಜಯಕಿರಣ್, ಉದಯ ಹೆಚ್., ಪಕೀರ ಗೌಡ, ಹೆಚ್. ವಿಜಯಾ, ಕೃಷ್ಣ ಪಿ.ಜಿ., ಗಣೇಶ್, ವಸಂತ್, ಗೋಪಾಲ ಆಚಾರ್ಯ, ಗುಲಾಬಿ ಮತ್ತಿತರರು ಉಪಸ್ಥಿತರಿದ್ದರು.