ಶೃಂಗೇರಿ: ಶೃಂಗೇರಿ ಮಠಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಹಾಗೂ ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರಿಗೆ ಶೃಂಗೇರಿ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿ ಅವರು ಆಶೀರ್ವಾದ ಮಾಡಲು ನಿರಾಕರಿಸಿದ್ದು, ಈ ಕುರಿತಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಜಗದ್ಗುರುಗಳು, “ನೀವು ಮಠಕ್ಕೆ ಬಂದಿದ್ದೀರಿ, ಧನ್ಯವಾದಗಳು. ಆದರೆ, ನೀವು ಏನು ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಿಲ್ಲ, ನಾವು ನಿಮ್ಮನ್ನು ಆಶೀರ್ವದಿಸಲು ಸಾಧ್ಯವಿಲ್ಲ” ಎಂದು ಹೇಳಿದರು ಎಂದು ಹೇಳಲಾಗುತ್ತಿದೆ.
ಸಭೆಯಲ್ಲಿ ಜಗದ್ಗುರುಗಳು ರಾಹುಲ್ ಮತ್ತು ಸಿದ್ದರಾಮಯ್ಯ ಅವರಿಗೆ ಹಿಂದೂ ಧರ್ಮದ ಬಗ್ಗೆ ಅಸಹಿಷ್ಣುತೆ ಇದ್ದರೆ, ನಿಮ್ಮ ಕಾರ್ಯಗಳಿಂದ ಹಿಂದೂ ಧರ್ಮದಲ್ಲಿ ಅಸಂಗತತೆಯನ್ನು ಉಂಟು ಮಾಡುವ ಬದಲು ದಯವಿಟ್ಟು ಹಿಂದೂ ಧರ್ಮದಿಂದ ದೂರವಿರಿ ಎಂದು ಹೇಳಿದರು. ಹಿಂದೂ ಮಠ, ಮಂದಿರಗಳ ನಿರ್ವಹಣೆಯನ್ನು ಸರಕಾರ ವಹಿಸಿಕೊಂಡಿದೆ. ಅಷ್ಟೇ ಅಲ್ಲ ಹುಂಡಿಯ ರೂಪದಲ್ಲಿ ಬರುವ ಹಣ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಬಳಕೆಯಾಗುತ್ತಿಲ್ಲ. ಅದೇ ಹಣವನ್ನು ಅನ್ಯ ಧರ್ಮದವರ ಕಲ್ಯಾಣಕ್ಕೆ ವಿನಿಯೋಗಿಸುತ್ತಿರುವುದು ಒಪ್ಪತಕ್ಕದ್ದಲ್ಲ. ನೀವು ನಮ್ಮ ಮಠಕ್ಕೆ ಬರುವುದು ಒಳ್ಳೆಯದು. ಆದರೆ ನೀವು ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ರೀತಿಗೆ ನಾವು ನಿಮಗೆ ಆಶೀರ್ವಾದ ನೀಡಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಇಬ್ಬರೂ ಜಗದ್ಗುರುಗಳಿಂದ ಇಂತಹ ತೀಕ್ಷ್ಣವಾದ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ಇಬ್ಬರೂ ತುಂಬಾ ತಡಬಡಾಯಿಸಿ ಸಭೆಯಿಂದ ಹೊರಬಂದರು ಎಂದು ಹೇಳಲಾಗುತ್ತಿದೆ.