ಹ್ಯಾಂಗ್ ಝೂ: ಪ್ರತಿಷ್ಠಿತ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ 10 ಮೀ ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ವಿಶ್ವದಾಖಲೆಯನ್ನೇ ಬರೆದಿದೆ.
ರುದ್ರಂಕ್ಷ್ ಪಾಟೀಲ್, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ದಿವ್ಯಾಂಶ್ ಸಿಂಗ್ ಪನ್ವಾರ್ ಅವರ ಮೂವರು ಒಟ್ಟು 1893.7 ಸ್ಕೋರ್‌ನೊಂದಿಗೆ ವಿಶ್ವ ದಾಖಲೆಯನ್ನು ಮುರಿದು 2023 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದು ಭಾರತದ ಗರಿಮೆಯನ್ನು ಮೇಲಕ್ಕೆತ್ತಿದ್ದಾರೆ.
ಆಗಸ್ಟ್ 2022 ರಲ್ಲಿ ಬಾಕು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಪಡೆದಿದ್ದ 1893.3 ಪಾಯಿಂಟ್‌ಗಳ ದಾಖಲೆಯನ್ನು ಭಾರತದ ತಂಡ 1893.7 ಅಂಕ ಪಡೆಯುವುದರೊಂದಿಗೆ ಭಾರತದ ಪುರುಷರ ತಂಡ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಮೊದಲ ಸರಣಿಯು ಭಾರತೀಯ ಶೂಟರ್‌ಗಳಿಂದ ನಿಧಾನ ಗತಿಯ ಪ್ರಯತ್ನ ಕಂಡು ಬಂದಿದ್ದು ರುದ್ರಂಕ್ಷ್ ಮತ್ತು ದಿವ್ಯಾಂಶ್ ತಲಾ 104.8 ನಿರ್ವಹಿಸಿದರೆ, ಐಶ್ವರಿ 104.1 ಸ್ಕೋರ್ ಮಾಡಿದರು. ನಂತರದ ಸುತ್ತುಗಳಲ್ಲಿ ಉತ್ತಮ ಪ್ರಯತ್ನವನ್ನು ಕಂಡುಕೊಂಡರು ಅದರಂತೆ ತಮ್ಮ ಸ್ಕೋರ್‌ಗಳನ್ನು ಸ್ಥಿರವಾಗಿ ಸುಧಾರಿಸಿದರು. ಆರನೇ ಸರಣಿಯ ಹೊತ್ತಿಗೆ, ತಂಡವು 1893.7 ಅಂಕಗಳನ್ನು ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಮುರಿದಿದೆ.
ಏಷ್ಯನ್ ಗೇಮ್ಸ್ ಆರಂಭವಾದ ಮೊದಲ ದಿನವೇ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಆರಂಭಿಸಿದ್ದು ಆರಂಭಿಕ ದಿನವಾದ ರವಿವಾರ ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಮೂರು ಬೆಳ್ಳಿ ಮತ್ತು ಒಂದು ಕಂಚು ಭಾರತದ ಪಾಲಾಗಿದೆ ಮೊದಲ ದಿನ ಭಾರತ ಪಡೆದುಕೊಂಡಿತ್ತು ಇಂದು 10 ಮೀಟರ್ ಏರ್ ರೈಫಲ್ ನಲ್ಲಿ ಚಿನ್ನ ಬಾಚುವ ಮೂಲಕ ವಿಶ್ವ ದಾಖಲೆಯನ್ನೇ ಬರೆದಿದೆ.