ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ಕೋಟಿ ಮಹಾಲಿಂಗೇಶ್ವರ ಜಪಯಜ್ಞ, ಶತರುದ್ರಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ಭಾನುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ.
ಬೆಳಿಗ್ಗೆ 9 ರಿಂದ ಆರಂಭಗೊಂಡ ಕಾರ್ಯಕ್ರಮದ ಅಂಗವಾಗಿ ಸಹಸ್ರಾರು ಭಕ್ತಾದಿಗಳು ತಮ್ಮ ಮನೆ ಮನೆಗಳಲ್ಲಿ ಓಂ. ಶ್ರೀ ಮಹಾಲಿಂಗೇಶ್ವರಾಯ ನಮಃ ಜಪ ಕೈಗೊಂಡು 108 ನಾಣ್ಯಗಳ ಸಹಿತ ಜಪಯಜ್ಞದ ಕುರಿತು ಬರೆದಿಡಲಾದ ಪ್ರತಿಯನ್ನು ಒಪ್ಪಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀ ದೇವರ ಪ್ರಸಾದ, ಶ್ರೀ ಮಹಾಲಿಂಗೇಶ್ವರ ದೇವರ ಫೋಟೊಗಳನ್ನು ನೀಡಲಾಗುತ್ತಿದೆ,
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸಮಿತಿ ಸದಸ್ಯರು, ಭಕ್ತಾದಿಗಳು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.