ಮಾಣಿ: ಪೆರ್ನೆಯ ಕಾರ್ಲ ಯುವ ಸ್ಪಂದನ ನೇತೃತ್ವದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ವತಿಯಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ ವಿಜೃಂಭಣೆಯಿಂದ ಜರಗಿತು.
ಶೋಭಾಯಾತ್ರೆಯಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ, ನಾಸಿಕ್ ಬ್ಯಾಂಡ್’ನ ಠೇಂಕಾರ ಮುಗಿಲು ಮುಟ್ಟಿತ್ತು. ಕುಣಿತ ಭಜನೆ, ಹುಲಿ ವೇಷಗಳು ಗಣೇಶೋತ್ಸವದ ಶೋಭಾಯಾತ್ರೆಗೆ ಸಾಂಪ್ರದಾಯಿಕ ಟಚ್ ನೀಡಿದವು. ಗೊಂಬೆ, ಟ್ಯಾಬ್ಲೋಗಳು ನೋಡುಗರ ಮನವನ್ನು ಸೂರೆಗೊಳ್ಳುವಂತೆ ಮಾಡಿದವು.
ವಿವೇಕಾನಂದರ ಭಾವಚಿತ್ರ ಸಹಿತ ಭಾರತ ಮಾತೆಯ ಭವ್ಯ ಭಾವಚಿತ್ರವನ್ನು ಹೊತ್ತ ಪೆರ್ನೆ ಯುವ ಸ್ಪಂದನದ ವಾಹನ ಮುಂದಿನಿಂದ ಸಾಗುತ್ತಿದ್ದರೆ, ಶಿವಾಜಿಯ ಭಾವಚಿತ್ರವನ್ನು ಹೊತ್ತ ವಾಹನ ಶೋಭಾಯಾತ್ರೆಯ ಮೆರುಗನ್ನು ಇಮ್ಮಡಿಗೊಳಿಸಿತು.