ಚಾರ್ವಾಕ : ನಾಣಿಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 27ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆದು, ಸಂಜೆ ಶ್ರೀ ಗಣೇಶನ ಶೋಭಾಯಾತ್ರೆ ನಡೆದು, ಶ್ರೀ ಕ್ಷೇತ್ರ ದೈಪಿಲದಲ್ಲಿ ಜಲಸ್ತಂಭನ ಮಾಡಲಾಯಿತು.
ಕುಮಾರಧಾರ ಫಾರ್ಮ್ಸ್ ನ ವಿಜಯ ಕುಮಾರ್ ಸೊರಕೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್. ಗೌಡ, ಗಂಗಾಧರ, ಅಂಬುಲ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ತಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ, ಕುಮಾರಸ್ವಾಮಿ ಭಟ್ ಅಂಬುಲ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವಸಂತ ಪೂಜಾರಿ ದಲಾರಿ, ನ್ಯಾಯವಾದಿ ವೆಂಕಪ್ಪ ಗೌಡ ಮಾಚಿಲ, ಶಾಲಾ ಮುಖ್ಯಶಿಕ್ಷಕ ಪದ್ಮಯ್ಯ ಗೌಡ ಪಾಲ್ಗೊಂಡು ಶುಭ ಹಾರೈಸಿದರು.
ಸಮಾರಂಭದಲ್ಲಿ ಊರಿನವರಾದ ಉದ್ಯಮಿ ಧರ್ಣಪ್ಪ ಗೌಡ ಅಂಬುಲ, ವಿಶ್ವನಾಥ ಅಂಬುಲ, ಲಕ್ಷ್ಮಣ ಕರಂದ್ಲಾಜೆ, ಗಣೇಶ್ ಉದನಡ್ಕ, ಪ್ರವೀಣ್ ಕುಂಟ್ಯಾನ, ಗಣೇಶ್ ಕುಂಬ್ಲಾಡಿ, ದೇವಣ್ಣ ಅಂಬುಲ, ವೆಂಕಪ್ಪ ಅಂಬುಲ, ಚಂದ್ರಶೇಖರ ಅಂಬುಲ, ಮಾಧವ ಕರಂದ್ಲಾಜೆ, ಅಂತರ ಕೃಷ್ಣಪ್ಪ, ಕಾಣಿಯೂರು ಗ್ರಾಪಂ ಉಪಾಧ್ಯಕ್ಷ ಗಂಗಮ್ಮ, ಸುಕ್ರೋತ ವಿಜಯ ಕುಮಾರ್, ಪಂಚಾಯತ್ ಸದಸ್ಯರಾದ ಕೀರ್ತಿ ಅಂಬುಲ, ಚಾರ್ವಾಕ ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಅಶೋಕ್, ಷಣ್ಮುಖ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುಜೀತ್ ಅರುವ, ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಖಂಡಿಗ, ಜಯಂತ ಅಂಬುಲ ಉಪಸ್ಥಿತರಿದ್ದರು.
ನ್ಯಾಯವಾದಿ ವಿಜಿತ್ ಮಾಚಿಲ ಸ್ವಾಗತಿಸಿದರು. ದಯಾನಂದ ಅಂಬುಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅರ್ಚಕರಾದ ಗಣಪತಿ ಭಟ್, ನೂತನ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಮಾರಂಭದಲ್ಲಿ ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಕೆವಿಜಿಯ ರೇಣುಕಾ ಪ್ರಸಾದ್ ಅವರು ಶಾಲೆಗೆ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದರು. ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶಾಲೆಗೆ 100 ನೀರಿನ ಗ್ಲಾಸ್ಗಳನ್ನು ಶಾಲಾ ಎಸ್ಡಿಎಂಸಿಗೆ ಹಸ್ತಾಂತರಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.
ಚಾರ್ವಾಕ ಷಣ್ಮುಖ ಸ್ಪೋರ್ಟ್ ಕ್ಲಬ್, ಶ್ರೀ ಕ್ಷೇತ್ರ ದೈಪಿಲ ಕ್ರೀಡಾ ಸಂಘ ವಿವಿಧ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿದರು. ಚಾರ್ವಾಕ ಷಣ್ಮುಖ ಸ್ಪೋರ್ಟ್ ಕ್ಲಬ್ ವತಿಯಿಂದ ಊಟೋಪಚಾರ ವ್ಯವಸ್ಥೆ ನಡೆಯಿತು.