ನವದೆಹಲಿ: ಬುಧವಾರವಷ್ಟೇ ಮೆಟಾ ಕಂಪನಿ ಲಾಂಚ್ ಮಾಡಿದ್ದ ವಾಟ್ಸಾಪ್ನ ಹೊಸ ಫೀಚರ್ ‘ಚಾನೆಲ್’ ಈಗ ಜನಪ್ರಿಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಈಗ ವಾಟ್ಸಾಪ್ ಚಾನೆಲ್ ಆರಂಭಿಸಿದ್ದಾರೆ. ವಾಟ್ಸಾಪ್ ಚಾನೆಲ್ನಲ್ಲಿ ತಮ್ಮ ಫಾಲೋವರ್ಸ್ಗೆ ಪಠ್ಯ, ಟೆಕ್ಸ್, ಫೋಟೋ, ವಿಡಿಯೋ, ಸ್ಟಿಕರ್ಸ್ ಷೇರ್ ಮಾಡಬಹುದು. ಜತೆಗೆ ಸಮೀಕ್ಷೆ ಕೂಡ ಕೈಗೊಳ್ಳಬಹುದು.
ಜನ ಸಂಪರ್ಕಕ್ಕೆ ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ
ಏನಿದು ವಾಟ್ಸಾಪ್ ಚಾನೆಲ್?:
ವಾಟ್ಸಾಪ್ ಚಾನೆಲ್, ಇದು ಒನ್ ವೇ ಬ್ರಾಡಕಾಸ್ಟರ್ ಸಾಧನವಾಗಿದೆ. ಅಡ್ಮಿನ್ಗಳುಫಾಲೋವರ್ಸ್ಗಳೊಂದಿಗೆ ಪಠ್ಯದಿಂದ ಮಲ್ಟಿಮೀಡಿಯಾ ಮತ್ತು ಸಮೀಕ್ಷೆಗಳವರೆಗೆ ವಿವಿಧ ರೀತಿಯ ವಿಷಯವನ್ನು ಹಂಚಿಕೊಳ್ಳಲು ಇದು ಅನುಮತಿಸುತ್ತದೆ. ವ್ಯಕ್ತಿಗತ ಬಳಕೆದಾರರು ತಮ್ಮ ನೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳ ಚಟುವಟಿಕೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇದರಿಂದ ಸಾಧ್ಯವಾಗಲಿದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗೆ ನಿಮ್ಮ ನಿಯಮಿತ ಚಾಟ್ಗಳಿಂದ ಭಿನ್ನವಾಗಿರುವ “ಅಪ್ಡೇಟ್ಗಳು” ಹೆಸರಿನ ಮೀಸಲಾದ ಟ್ಯಾಬ್ ಮೂಲಕ ವಾಟ್ಸಾಪ್ ಚಾನೆಲ್ ಪ್ರವೇಶಿಸಬಹುದಾಗಿದೆ.
ವಾಟ್ಸಾಪ್ ಚಾನೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ? :
ಚಾನೆಲ್ಗಳು ಒನ್ವೇ ಬ್ರಾಡ್ಕಾಸ್ಟ್ ಆಗಿರುವುದರಿಂದ ಅಡ್ಮಿನ್ಗೆ ಮಾತ್ರ ಶೇರ್ ಮಾಡುವ ಹಕ್ಕಿರುತ್ತದೆ. ಬಳಕೆದಾರರು ಎಮೋಜಿಗಳ ಮೂಲಕ ಮಾತ್ರವೇ ಪ್ರತಿಕ್ರಿಯೆ ನೀಡಬಹುದು. ಹಾಗೆಯೇ, ಚಾನೆಲ್ ಪೋಸ್ಟ್ಗೆ ಎಷ್ಟು ರಿಯಾಕ್ಷನ್ಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬಹುದು.30 ದಿನಗಳವರೆಗೆ ಮಾತ್ರ ಅಡ್ಮಿನ್ಗಳಿಗೆ ತಮ್ಮ ಕಂಟೆಂಟ್ ಅಪ್ಡೇಟ್ ಮಾಡುವ ಇಲ್ಲವೇ ಬದಲಾವಣೆ ಮಾಡುವ ಅವಕಾಶವನ್ನು ಈ ಹೊಸ ಫೀಚರ್ ಒದಗಿಸುತ್ತದೆ. ಅದರ ವಾಟ್ಸಾಪ್, ತನ್ನ ಪ್ಲಾಟ್ಫಾರ್ಮ್ ಸರ್ವರ್ ಗಳಿಂದ ಹಳೆಯ ಅಪ್ಡೇಟ್ಗಳನ್ನು ಸ್ವಯಂಚಾಲಿತವಾಗಿ ಡಿಲಿಟ್ ಮಾಡುತ್ತದೆ. ಇದಲ್ಲದೆ, ನೀವು ಚಾಟ್ಗಳು ಅಥವಾ ಗ್ರೂಪ್ಗಳಿಗೆ ಅಪ್ಡೇಟ್ಸ್ ಫಾರ್ವರ್ಡ್ ಮಾಡಿದಾಗ ಅದು ಸ್ವಯಂಚಾಲಿತವಾಗಿ ಮೂಲ ಚಾನಲ್ಗೆ ಲಿಂಕ್ ಒಳಗೊಂಡಿರುತ್ತದೆ. ಇದರಿಂದಾಗಿ ಚಾನೆಲ್ನ ಕಂಟೆಂಟ್ ಹುಡುಕುವ ಇತರರಿಗೆ ಸುಲಭ ಪ್ರವೇಶ ಒದಗಿಸಲು ಸಾಧ್ಯವಾಗುತ್ತದೆ.
ನರೇಂದ್ರ ಮೋದಿ ವಾಟ್ಸಾಪ್ ಚಾನೆಲ್ ಫಾಲೋ ಮಾಡುವುದು ಹೇಗೆ?
ಮೊದಲಿಗೆ ನಿಮ್ಮ ವಾಟ್ಸಾಪ್ ಅಪ್ಡೇಟ್ ಆಗಿದೆಯಾ ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ಆಗಿರದಿದ್ದರೆ ಗೂಗಲ್ ಪ್ಲೇಸ್ಟೋರ್ಗೆ ಹೋಗಿ, ವಾಟ್ಸಾಪ್ ಅಪ್ಡೇಟ್ ಮಾಡಿಕೊಳ್ಳಿ. ಇಷ್ಟಾದ ಮೇಲೆ ಮೊದಲಿಗೆ ವಾಟ್ಸಾಪ್ ತೆರೆಯಿರಿ ಮತ್ತುಅಪ್ಡೇಟ್ಗೆ ನ್ಯಾವಿಗೇಟ್ ಮಾಡಿ. ಬಳಿಕ, ನಿಮ್ಮ ಸ್ಟೀನ್ನ ಕೆಳಭಾಗದಲ್ಲಿ, ನೀವು “Find Channels” ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್ಗಳ ಪಟ್ಟಿ ನಿಮ್ಮ ಮುಂದೆ ಗೋಚರವಾಗುತ್ತದೆ. ಚಾನೆಲ್ ಸೇರಲು, ಚಾನೆಲ್ ಮುಂದೆ ಇರುವ plus icon ಮೇಲೆ ಟ್ಯಾಪ್ ಮಾಡಿ. ಮತ್ತೊಂದು ರೀತಿಯಲ್ಲೂ ನೀವು ಚಾನೆಲ್ ಜಾಯಿನ್ ಆಗಬಹುದು. ಇದಕ್ಕಾಗಿ ನೀವು, ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಹುಡುಕಾಟ ಐಕಾನ್ ಅನ್ನು ನೀವು ಬಳಸಬಹುದು ಅಥವಾ ಕ್ಲಿಕ್ ಮಾಡಿ ಮತ್ತು ಹುಡುಕಬಹುದು