ಪುತ್ತೂರು ನಗರದ ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ವತಿಯಿಂದ ಏಳು ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧ 66ನೇ ವರ್ಷದ ಗಣೇಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಬೆಳಿಗ್ಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕಿಲ್ಲೆ ಮೈದಾನಕ್ಕೆ ತಂದು, 11 ಗಂಟೆಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ದೇವತಾ ಸಮಿತಿ ಕಾರ್ಯದರ್ಶಿ ರಮೇಶ್, ಕೋಶಾಧಿಕಾರಿ ಸಿ.ಶ್ರೀಧರ ನಾಯಕ್, ಸಮಿತಿ ಸದಸ್ಯರಾದ ದಿನೇಶ್ ಕುಲಾಲ್ ಪಿ.ವಿ., ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರತ್ನಾಕರ ಆಚಾರ್ಯ, ಕಿಟ್ಟಣ ಗೌಡ, ವಸಂತ ನಾಯಕ್, ಸುರೇಶ್ ಕುಮಾರ್, ಸುದರ್ಶನ್ ಶೆಟ್ಟಿ, ಗಣಪತಿ ಪೈ, ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.
ಉತ್ಸವ ಬಲಿ ವಿಶೇಷತೆ :
ಈ ಗಣೇಶನ ವಿಶೇಷವೆಂದರೆ ಏಳು ದಿನಗಳ ಕಾಲ ನಡೆಯುವ ಈ ಗಣೇಶೋತ್ಸವದಲ್ಲಿ ಕೊನೆಯ ದಿನ ಅಲಂಕೃತ ಶ್ರೀ ಗಣೇಶನ ಮೂರ್ತಿಯ ಬಲಿ ಉತ್ಸವ ನಡೆಯುವುದು ಇಲ್ಲಿಯ ವಿಶೇಷತೆಯಾಗಿದೆ.