ಶ್ರೀನಗರ: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಕಮಾಂಡರ್ ಉಜೈರ್ ಖಾನ್ ಹತ್ಯೆಯಾಗಿದ್ದಾನೆ. ಮತ್ತೊಬ್ಬ ಉಗ್ರನ ಶವವನ್ನು ಸೇನೆ ಪತ್ತೆ ಮಾಡಿದೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕ ಉಜೈರ್ ಖಾನ್ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಉಜೈರ್ ಹತ್ಯೆಯೊಂದಿಗೆ ಒಂದು ವಾರದ ಅನಂತನಾಗ್ ಎನ್‌ಕೌಂಟರ್ ಅಂತ್ಯಗೊಂಡಿದೆ.
ಅನಂತ್‌ನಾಗ್ ಜಿಲ್ಲೆಯ ಗರೋಲ್ ಅರಣ್ಯದಲ್ಲಿ ಒಂದು ವಾರದ ಜಂಟಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಕೊನೆಗೊಂಡಿದೆ ಆದರೆ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಕಾಶ್ಮೀರ ಹೆಚ್ಚುವರಿ ಡಿಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಸೋಮವಾರ ಪತ್ತೆಯಾದ ಶವವನ್ನು ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಜೈರ್ ಖಾನ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದರು. ಮತ್ತೋರ್ವ ಭಯೋತ್ಪಾದಕನ ಶವ ಪತ್ತೆಯಾಗಿದೆ. ಆದರೆ ಆತನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕಾರ್ಯಾಚರಣೆ ಮುಂದುವರಿಕೆ
ಕಾರ್ಯಾಚರಣೆ ದಟ್ಟಾರಣ್ಯದಲ್ಲಿ ನಡೆಯುತ್ತಿರುವುದರಿಂದ ಶೋಧ ಕಾರ್ಯ ಮುಂದುವರೆಯಲಿದೆ. ಅಲ್ಲಿ ಬಿದ್ದಿರುವ ಶೆಲ್‌ಗಳನ್ನು ನಾಶಪಡಿಸಬೇಕಿದೆ. ಎರಡು-ಮೂರು ಭಯೋತ್ಪಾದಕರ ಬಗ್ಗೆ ನಮಗೆ ಮಾಹಿತಿ ಇತ್ತು. ಮೂರನೇ ಉಗ್ರ ಇದ್ದಾನೆಯೇ ಎಂದು ಶೋಧ ಮುಂದುವರಿಸುತ್ತೇವೆ ಎಂದು ಎಡಿಜಿ ತಿಳಿಸಿದ್ದಾರೆ. ಭಯೋತ್ಪಾದಕರಿಂದ ಈ ಪ್ರದೇಶದಲ್ಲಿ ಜೀವಂತ ಗ್ರೆನೇಡ್‌ಗಳು ಮತ್ತು ಶೆಲ್‌ಗಳು ಇರಬಹುದಾದ್ದರಿಂದ ಆ ಪ್ರದೇಶಕ್ಕೆ ಹೋಗಬೇಡಿ ಎಂದು ಪೊಲೀಸ್ ಅಧಿಕಾರಿ ಜನರಿಗೆ ಸೂಚಿಸಿದರು.
ಕೋಕರ್ನಾಗ್ ದಾಳಿಯ ಹಿಂದಿನ ಕಾಶ್ಮೀರಿ ಭಯೋತ್ಪಾದಕ ಉಜೈರ್ ಬಶೀರ್ ಖಾನ್ ಯಾರು?
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಸೆಪ್ಟೆಂಬರ್ 12ರಂದು ಗದೋಲ್ ಗ್ರಾಮದಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನೆಯ ಜಂಟಿ ತಂಡದ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಭಯೋತ್ಪಾದಕರ ಗುಂಪಿನಲ್ಲಿ ಉಜೈರ್ ಖಾನ್ ಕೂಡ ಇದ್ದನು. ಈ ದಾಳಿಯಲ್ಲಿ ಇಬ್ಬರು ಹಿರಿಯ ಸೇನಾ ಅಧಿಕಾರಿಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಉಜೈರ್ ಖಾನ್ ಬಗ್ಗೆ ಹೇಳಲಾಗಿದ್ದು, ಆತ ಹೆಚ್ಚು ತರಬೇತಿ ಪಡೆದ ಭಯೋತ್ಪಾದಕನಾಗಿದ್ದ. ಇದಲ್ಲದೆ ಆತನಿಗೆ ಅನಂತನಾಗ್ ಪ್ರದೇಶದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಇದೇ ಕಾರಣಕ್ಕೆ ಹಲವು ದಿನಗಳಿಂದ ಭದ್ರತಾ ಪಡೆಗಳಿಗೆ ತೊಂದರೆ ಆಗುತ್ತಿತ್ತು.
ಅರಣ್ಯ ಪ್ರದೇಶದಲ್ಲಿ ಎರಡು ಮೃತ ದೇಹಗಳು ಪತ್ತೆ
ಅರಣ್ಯ ಪ್ರದೇಶದಲ್ಲಿ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಮೃತರಲ್ಲಿ ಒಬ್ಬರನ್ನು ಯೋಧ ಪ್ರದೀಪ್ ಎಂದು ಗುರುತಿಸಲಾಗಿದ್ದು, ಬುಧವಾರ ನಡೆದ ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ಹುತಾತ್ಮನಾದ ಮತ್ತೊಬ್ಬ ಮೃತನ ಗುರುತು ಪತ್ತೆ ಹಚ್ಚಲಾಗುತ್ತಿದೆ. ಹುಮಾಯೂನ್ ಭಟ್ ಹೊರತುಪಡಿಸಿ, 19 ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಆಫೀಸರ್ ಕರ್ನಲ್ ಮನ್‌ಪ್ರೀತ್ ಸಿಂಗ್ ಮತ್ತು ಮೇಜರ್ ಆಶಿಶ್ ಧೋಚಕ್ ಕಳೆದ ಬುಧವಾರ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾಗಿದ್ದರು.