ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ 2023-24 ರ ಶೈಕ್ಷಣಿಕ ವರ್ಷದ ಮಾಹಿತಿ ಕಾರ್ಯಕ್ರಮ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ವಂ|ಡಾ| ಅಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಎಸ್.ಎಸ್. ಘಟಕ ಬಹಳ ಪ್ರಮುಖ ಘಟಕವಾಗಿದ್ದು, ಸೇವೆ ನೀಡುವ ಘಟಕವಾಗಿದೆ. ಸೇವೆಯೇ ಅದರ ಧ್ಯೇಯವಾಗಿರುತ್ತದೆ. “ನನಗಾಗಿ ಅಲ್ಲ ನಿನಗಾಗಿ” ಎಂಬ ಧ್ಯೇಯ ವಾಕ್ಯದಡಿ ಕಾರ್ಯನಿರ್ವಹಿಸುವ ಎನ್.ಎಸ್.ಎಸ್.ನಂತಹ ಘಟಕಗಳಲ್ಲಿ ಸ್ವಯಂಸೇವಕರಾಗಿರುವ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು.
ಕಾಲೇಜಿನ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ವಾಸುದೇವ ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಎನ್.ಎಸ್.ಎಸ್. ಸ್ವಯಂ ಸೇವಕರಿಗೆ ಶಿಸ್ತು, ಜವಾಬ್ದಾರಿ ಹಾಗೂ ಜೀವನಾನುಭವನ್ನು ನೀಡುತ್ತದೆ. ಬರೇ ಅಂಕ ಗಳಿಕೆಗಾಗಿ ಇರುವುದಲ್ಲ. ಸ್ವಾವಲಂಬಿ ಜೀವನಕ್ಕೆ ಎನ್.ಎಸ್.ಎಸ್. ಅತೀ ಅಗತ್ಯ ಎಂದರು.
ಘಟಕದ ಕಾರ್ಯಕ್ರಮಾಧಿಕಾರಿ ಪುಷ್ಪಾ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೀರ್ತಿ ಹಾಗೂ ಬಳಗದವರು ಪ್ರಾರ್ಥಿಸಿದರು. ಬಿಂದುಶ್ರೀ ಕಾರ್ಯಕ್ರಮ ನಿರೂಪಿಸಿದರು. ಟಿನ್ಸಿ ತೋಮಸ್ ವಂದಿಸಿದರು. ಸುಮಾರು 250 ಕ್ಕೂ ಅಧಿಕ ಸ್ವಯಂ ಸೇವಕರು ಭಾಗವಹಿಸಿದ್ದರು.