ಪುತ್ತೂರು: ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಉಪ್ಪಿನಂಗಡಿ ರೋಟರಿ ಕ್ಲಬ್ ಸಂಚಾಲಕತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಅ. 1ರಂದು ತಾಲೂಕು ಮಟ್ಟದ ಭಾಷಣ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ.
ಎರಡೂ ಸ್ಪರ್ಧೆ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢಶಾಲಾ ವಿಭಾಗ, ಕಾಲೇಜು ವಿಭಾಗ ಮತ್ತು ಸಾರ್ವಜನಿಕ ವಿಭಾಗದಲ್ಲಿ ನಡೆಯಲಿದೆ. ವಿಜೇತರಿಗೆ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಬಹುಮಾನ ನೀಡಿ ಗೌರವಿಸಲಾಗುವುದು.
ಮೂರು ನಿಮಿಷದ ಕಾಲಾವಕಾಶ, ಸ್ಪರ್ಧೆಯ ವಿಷಯ ಗಾಂಧಿ ಜಯಂತಿ. ಸ್ವಾತಂತ್ರ್ಯ, ದೇಶಭಕ್ತಿ ಇವುಗಳಲ್ಲಿ ಯಾವುದೇ ವಿಷಯವನ್ನು ಆಯ್ಕೆ ಮಾಡಬಹುದು. ದೇಶಭಕ್ತಿ ಗೀತೆಗೆ ಕರೋಕಿ ಬಳಸಲು ಅವಕಾಶವಿಲ್ಲ. ಸಮೂಹ ಗೀತೆಗೆ ಅವಕಾಶವಿಲ್ಲ. ಜಾತಿ, ಮತ, ಧರ್ಮ ನಿಂದನೆಗೆ ಹಾಗೂ ರಾಜಕೀಯ ವಿಷಯಗಳಿಗೆ ಅವಕಾಶ ಇಲ್ಲ. ಪುತ್ತೂರು ತಾಲೂಕಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಹಾಗೂ ಪುತ್ತೂರು ತಾಲೂಕಿನ ನಿವಾಸಿಗಳು, ಉದ್ಯೋಗಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನೊಂದಣಿ ಮಾಡಲು ಕೊನೆಯ ದಿನಾಂಕ ಸೆ. 25. ಆಸಕ್ತರು ಕಾರ್ಯಕ್ರಮ ಸಂಯೋಜಕ ನವೀನ್ ಬ್ರ್ಯಾಗ್ಸ್ ದೂರವಾಣಿ ಸಂಖ್ಯೆ 9591168205 ಅಥವಾ ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ 9844401295ಗೆ ತಮ್ಮ ಹೆಸರು, ಸ್ಪರ್ಧಾ ವಿಭಾಗ, ಸ್ಪರ್ಧೆಯ ವಿಷಯ, ತಮ್ಮ ದೂರವಾಣಿ ಸಂಖ್ಯೆಗಳನ್ನು ವಾಟ್ಸಪ್ ಮಾಡಬೇಕಾಗಿ ಪ್ರಕಟಣೆ ತಿಳಿಸಿದೆ.