ಪುತ್ತೂರು: ಅಡಕೆ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತಕ್ಷಣವೇ ಮಂತ್ರಿ ಪದವಿಯಿಂದ ಕೈಬಿಡುವಂತೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ವತಿಯಿಂದ ಪುತ್ತೂರು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಗೃಹ ಸಚಿವ ಅರಜ ಜ್ಞಾನೇಂದ್ರ ಅವರು ಅಧಿವೇಶನದಲ್ಲಿ ಅಡಕೆ ಬೆಳೆಗೆ ಪ್ರೋತ್ಸಾಹ ನೀಡಬಾರದು. ಅಡಕೆ ಬೆಳೆಯುವುದನ್ನು ನಿಲ್ಲಿಸಬೇಕು ಎಂಬ ಹೇಳಿಕೆ ನೀಡಿ ಅಡಕೆ ಬೆಳಗಾರರಿಗೆ ದೊಡ್ಡ ಅಘಾತ ನೀಡಿದ್ದಾರೆ. ಅವರ ಹೇಳಿಕೆಯಿಂದ ಅಡಕೆ ಧಾರಣೆ ಕುಸಿಯುವ ಸಾಧ್ಯತೆಯಿದ್ದು, ಈ ಹೇಳಿಕೆಯಿಂದ ರೈತರಿಗೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಈ ಸಂದರ್ಭ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೊನ್ನಪ್ಪ ಗೌಡ ಪರಣೆ, ಈಶ್ವರ ಗೌಡ ಬಡಿಲ, ಕುಂಬ್ರ ವಲಯ ಅಧ್ಯಕ್ಷ ಶೇಖರ್ ರೈ, ಆಲಂಗಾರು ವಲಯ ಅಧ್ಯಕ್ಷ ಈಶ್ವರ ಗೌಡ, ಈಶ್ವರಮಂಗಲ ವಲಯ ಅಧ್ಯಕ್ಷ ಶಿವಚಂದ್ರ ಪಿ, ಮಹಿಳಾ ಘಟಕದ ಅಧ್ಯಕ್ಷೆ ಹರಿಣ ವಿ ರೈ, ರೈತ ಮುಖಂಡರಾದ ಮುರುವ ಮಹಾಬಲ ಭಟ್, ಜಯಪ್ರಕಾಶ್ ರೈ ನೂಜಿ, ವಲೇರಿಯನ್ ಮಸ್ಕರೇನಸ್, ಚಂದ್ರಶೇಖರ್ ನಾಯಕ್, ಭಾಸ್ಕರ ತುಂಬೆ ಮತ್ತಿತರರು ಉಪಸ್ಥಿತರಿದ್ದರು.