ಪುತ್ತೂರು: 2001 ಸೆ. 11ರಂದು ನಡೆದ ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ಹೇಮಂತ ಕುಮಾರ್ ಸಂಸ್ಮರಣಾ ಕಾರ್ಯಕ್ರಮ ಬಿಲ್ಲವ ಸಂಘದ ಹೇಮಂತ ಕುಮಾರ್ ಸಭಾಭವನದಲ್ಲಿ ಜರಗಿತು.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಫ ಮತ್ತು ದಿ| ಹೇಮಂತ ಕುಮಾರ್ ಸ್ಮಾರಕ ಸಮಿತಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಪೂಜೆ ನೇರವೇರಿಸಿ, ದೀಪ ಬೆಳಗಿಸಿ ಹೇಮಂತ ಕುಮಾರ್ ತೈಲಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ಸಂದರ್ಭ ಹೇಮಂತ ಕುಮಾರ್ ಅವರ ತಂದೆ ಪಿ. ಆನಂದ ಟೈಲರ್, ತಾಯಿ ಪಿ. ಕುಸುಮ, ಸಹೋದರ ಪ್ರಶಾಂತ್ ಕುಮಾರ್, ಶ್ವೇತಾ ಪ್ರಶಾಂತ್, ಶ್ರುಶಾಂತ್, ಶ್ರೀಯಾ ಪುಷ್ಪ ನಮನ ಸಲ್ಲಿಸಿದರು.
ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಹೇಮಂತ್ ಕುಮಾರ್ ನೆನಪು ಸದಾ ಕಾಲ ಸಂಘಕ್ಕಿದೆ. ಅಲ್ಲದೇ, ಆನಂದ್ ಟೈಲರ್ ಮನೆಯವರ ಕೊಡುಗೆ ಸಂಘಕ್ಕೆ ಅನನ್ಯವಾದುದು ಹಾಗೂ ಬಿಲ್ಲವ ಸಂಘ ಅವರ ಸಮಾಜಮುಖಿ ಚಿಂತನೆಯನ್ನು ಗೌರವಿಸುತ್ತದೆ ಎಂದರು.
ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಸಿ. ನಾರಾಯಣ ರೆಂಜ ಮಾತನಾಡಿ, ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ಹೇಮಂತ ಕುಮಾರ್ ಓರ್ವ ಪ್ರತಿಭಾನ್ವಿತ ಯುವಕ. ಯುವಸಮಾಜಕ್ಕೆ ಪ್ರೇರಣಾದಾಯಿ. ಅವರ ನೆನಪಿನಲ್ಲಿ ನಮ್ಮ ಯುವಸಮಾಜ ಜಾಗೃತವಾಗಿ ಉನ್ನತ ಯಶಸ್ಸು ಸಾಧಿಸಬೇಕು. ಕಷ್ಟದ ಕಾಲದಲ್ಲೂ ಕುಟುಂಬ ಸಮಾಜದ ಮೇಲೆ ಪ್ರೀತಿ ಇಟ್ಟು, ಬಿಲ್ಲವ ಸಂಘಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಶೇಷಪ್ಪ ಬಂಗೇರ, ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ವಿಮಲ ಸುರೇಶ್, ಕಾರ್ಯದರ್ಶಿ ಚಿದಾನಂದ ಸುವರ್ಣ, ಕೋಶಾಧಿಕಾರಿ ಮಹೇಶ್ಚಂದ್ರ ಸಾಲಿಯಾನ್, ಜೊತೆ ಕಾರ್ಯದರ್ಶಿ ದಯಾನಂದ ಕರ್ಕೇರ, ನಾರಾಯಣ ಗುರು ಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್ ಕೋಲಾಡಿ, ಸಜ್ಜನ್ ಕುಮಾರ್, ಅವಿನಾಶ್ ಹಾರಾಡಿ, ವೇದಾವತಿ, ಪುರುಷೋತ್ತಮ ಹಳೇನೆರಂಕಿ, ವಾಸು ಪೂಜಾರಿ, ಪದ್ಮಪ್ಪ ಪೂಜಾರಿ, ಅಣ್ಣಿ ಪೂಜಾರಿ, ಸಂಘದ ಮ್ಯಾನೇಜರ್ ಪ್ರಕಾಶ್, ಮೋಹನ್ ತೆಂಕಿಲ, ರಾಧಾಕೃಷ್ಣ ನಾಯ್ಕ್, ಮೋಹನ್ ಕುಮಾರ್ ಬಿ.ಯಂ, ಕರುಣಾಕರ ಬಿ.ಯಂ, ರವೀಂದ್ರ ಬಿ.ಯಂ, ನಾರಾಯಣ ಹಾಗೂ ಆನಂದ ಟೈಲರ್ ಕುಟುಂಬಸ್ಥರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ರಾಮಕೃಷ್ಣ ಆಶ್ರಮದ ಮಕ್ಕಳಿಗೆ ಅನ್ನಸಂತರ್ಪಣೆ ನಡೆಯಿತು.