ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ ಸುಧಾಕರ್ ಅವರ ವಿರುದ್ಧ ಎಫ್.ಐ.ಆರ್ ದಾಖಲಾದ ಹಿನ್ನೆಲೆಯಲ್ಲಿ ಸಂಪುಟದಿಂದ ಅವರನ್ನು ಕೈ ಬಿಡಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಸುಧಾಕರ್ ಅವರನ್ನು ಸಂಪುಟದಿಂದ ಕೈ ಬಿಟ್ಟು ಮುಖ್ಯಮಂತ್ರಿ ಮೇಲ್ಪಂಕ್ತಿ ಹಾಕಲಿ. ಪ್ರಭಾವವನ್ನು ಬಳಸಿ ಪ್ರಕರಣದ ತಿರುಚುವ ಮೊದಲು ಸುಧಾಕರ್ ಅವರನ್ನು ವಜಾ ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ಸಿಗರು ಗ್ಯಾರಂಟಿ ಮೂಲಕ ಎಸ್‌ಸಿ ಎಸ್‌ಪಿ ಹಣ ನುಂಗಿದ್ರು. ಈಗ ಸುಧಾಕರ್ ದಲಿತರ ದಲಿತರ ಮೇಲೆ ದೌರ್ಜನ್ಯವೆಸಗಿದ್ದಾರೆ. ಕೇಸ್ ದಾಖಲಾದ್ರೂ ಸುಧಾಕರ್ ಬಂಧಿಸಲು ಮೀನಾಮೇಷ ಮಾಡಲಾಗುತ್ತಿಎ. ಕಾಂಗ್ರೆಸ್ ಗೆ ದಲಿತರೆಂದರೆ ಕೇವಲ ವೋಟ್ ಬ್ಯಾಂಕ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಆರೋಪ ಅಲ್ಲಗಳೆದ ಡಿ ಸುಧಾಕರ್:
ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿರುವ ಸಚಿವ ಸುಧಾಕರ್, ನಾನು ಯಾವುದೇ ದೌರ್ಜನ್ಯವಾಗಲಿ, ಜಾತಿ ನಿಂಧನೆಯಾಗಲಿ ಮಾಡಿಲ್ಲ ಎಂದು ಹೇಳಿದ್ದಾರೆ. ಯಾರ ವಿರುದ್ಧವೇ ಆಗಲಿ ದೂರು ನೀಡಿದರೆ ಎಫ್‌ಐಆರ್ ದಾಖಲಾಗುತ್ತದೆ. ತನಿಖೆ ಬಳಿಕವೇ ಸತ್ಯಾಂಶ ಹೊರಬರುವುದು. ಅನ್ಯಾಯವಾಗಿದ್ದರೆ ಕಾನೂನು, ಕೋರ್ಟ್ ಇದೆ. ನನ್ನ ಮೇಲಿನ ಆರೋಪವೆಲ್ಲ ಸುಳ್ಳು. ನಾನು ಯಾರನ್ನೂ ನಿಂಧಿಸಿಲ್ಲ, ಆವಾಜ್ ಹಾಕಿಲ್ಲ. 2008ರಲ್ಲೂ ನನ್ನ ಮೇಲೆ ಇದೇ ರೀತಿ ಎಫ್‌ಐಆರ್ ಆಗಿತ್ತು. ನನ್ನನ್ನ ತೇಜೋವಧೆ ಮಾಡಲಾಗುತ್ತಿದೆ. ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಸಚಿವ ಸುಧಾಕರ್ ಮಾಧ್ಯಮಗಳಿಗೆ ಹೇಳಿದ್ದಾರೆ.