ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಪೂರ್ವಾಭಾವಿ ಸಭೆಯು ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಮಾತನಾಡಿ, ಕಳೆದ 88 ವರ್ಷದಿಂದ ಮಂದಿರದಲ್ಲಿ ನವರಾತ್ರಿ ಉತ್ಸವ, ಶಾರದೆ ವಿಗ್ರಹ ಪ್ರತಿಷ್ಠೆ, ಶೋಭಾಯಾತ್ರೆ ನಡೆಯುತ್ತಿದೆ. ಈ ವರ್ಷದಿಂದ ಉತ್ಸವಕ್ಕೆ ಹೊಸ ಸಮಿತಿ ರಚನೆ ಮಾಡುವ ಜತೆಗೆ 10 ದಿನದ ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ನಡೆಸಿ ಉತ್ಸವಕ್ಕೆ ಮೆರುಗು ನೀಡುವ ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ರಮಾನಂದ ರಾವ್, ಯಶವಂತ್ ಆಚಾರ್ಯ, ರಾಧಾಕೃಷ್ಣ ರಾವ್, ಗೋಪಾಲ ಆಚಾರ್ಯ, ಗೋಪಾಲ ನಾಯ್ಕ್, ಜಯಕಿರಣ್, ಶ್ರೀಧರ ಆಚಾರ್ಯ, ಪಕೀರ ಗೌಡ, ಜಲಜಾಕ್ಷಿ ಎನ್. ಹೆಗ್ಡೆ, ಭರತ್, ಶ್ರುತಿ, ಸುನಿತಾ, ಸುಧೀರ್ ನೋಂಡಾ, ನಿಖಿಲ್ ರಾಜ್, ಜಿ. ಮಹಾಬಲ ರೈ ವಳತ್ತಡ್ಕ, ಯೋಗಾನಂದ ರಾವ್, ದಯಾನಂದ ಹೆಗ್ಡೆ ಬನ್ನೂರು, ಎನ್. ಗಣಪತಿ ನಾಯಕ್, ಪದ್ಮನಾಭ ಜಿ., ಸುದರ್ಶನ್ ಮುರ, ರಾಮಣ್ಣ ಗೌಡ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.
ಮಂದಿರದ ಕೋಶಾಧಿಕಾರಿ ತಾರನಾಥ್ ಎಚ್. ವಂದಿಸಿದರು. ಸದಸ್ಯ ಅಶೋಕ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.