ಬೆಂಗಳೂರು: ರಾಜ್ಯ ಸರಕಾರ ರಾಜ್ಯದ ಶಾಲೆಗಳಿಗೆ ಈ ಬಾರಿಯೂ ದಸರಾ ರಜೆಯನ್ನು ಕಡಿತಗೊಳಿಸಿದೆ.
ಈ ಹಿನ್ನಲೆಯಲ್ಲಿ ಇದೀಗ ಶಿಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಅ.2 ರಿಂದ 29 ರ ವರೆಗೆ ನೀಡಲಾಗುತ್ತಿದ್ದ ದಸರಾ ರಜೆಯನ್ನು ಕೊರೊನಾ ಹಿನ್ನಲೆಯಲ್ಲಿ ಕಡಿತಗೊಳಿಸಲಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ನಡೆಯದ ತರಗತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೂ ಹಿಂದಿನ ಕಡಿತ ನೀತಿ ಅನುಸರಿಸುತ್ತಿದೆ.
ಸಾಮಾನ್ಯ ಶಾಲೆಗಳಿಗೆ ಅ.8 ರಿಂದ 24 ಕ್ಕೆ ಸೀಮಿತಗೊಳಿಸಲಾಗಿದ್ದು, ವಿಶೇಷ ಶಾಲೆಗಳಿಗೆ ದಸರಾ ರಜೆಯನ್ನು ರದ್ದುಗೊಳಿಸಲಾಗಿದೆ. ಈ ಮೂಲಕ ಇಲಾಖೆಯ ವಿವಿಧ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರಿಗೆ ನಿರಂತರ ಕರ್ತವ್ಯ ಮಾಡುವಂತಾಗಿದೆ.