ನವದೆಹಲಿ: ಭಾರತದ ಬಾಹ್ಯಾಕಾಶ ಸಂಸ್ಥೆಯು ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್ ಸಂಚಾರ ನಡೆಸುವ ವೀಡಿಯೊವನ್ನು ಹಂಚಿಕೊಂಡಿದೆ. ಚಂದ್ರನ ಮೇಲೈಯಲ್ಲಿ ಅನೇಕ ಕುಳಿಗಳು ಮತ್ತು ಬಂಡೆಗಳನ್ನು ತಪ್ಪಿಸಿ ಚಲಿಸುವ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದ್ದು, ಬೆಂಗಳೂರಿನ ಸೆಂಟರ್‌ನಿಂದ ದೂರದಿಂದಲೇ ರೋವರ್ ಚಾಲನೆ ನಿಯಂತ್ರಿಸಲಾಗುತ್ತಿದೆ.
ಮುಂದಿನ ವಾರದೊಳಗೆ (ಭೂಮಿಯ 14ದಿನಗಳು) ತನ್ನ ಪ್ರಯೋಗಳನ್ನು ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ ಪ್ರಗ್ಯಾನ್ ರೋವರ್ ತೊಡಗಿದೆ.
ಸುರಕ್ಷಿತ ಮಾರ್ಗದ ಹುಡುಕಾಟದಲ್ಲಿ ರೋವರ್ ಅನ್ನು ತಿರುಗಿಸಲಾಗಿದೆ. ತಿರುಗುವಿಕೆಯನ್ನು ಲ್ಯಾಂಡ ಇಮೇಜರ್ ಕ್ಯಾಮೆರಾ ಸೆರೆಹಿಡಿಯಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಎಕ್ಸ್ (ಹಿಂದಿನ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ. ಈ ನೋಟವು “ಚಂದಮಾಮನ ಅಂಗಳದಲ್ಲಿ ಮಗು ತಮಾಷೆಯಾಗಿ ಕುಣಿಯುತ್ತಿರುವಂತೆ ಭಾಸವಾಗುತ್ತದೆ, ತಾಯಿ ಪ್ರೀತಿ, ಪ್ರೀತಿ ಎಚ್ಚರಿಕೆಯಿಂದ ಅದನ್ನು ಗಮನಿಸುತ್ತಿದ್ದಾಳೆ ಇಸ್ರೋ ಹೇಳಿದೆ.