ಪುತ್ತೂರು: ಮಕ್ಕಳ ಶಿಸ್ತು ಬದ್ಧ ನಡವಳಿಕೆಯಲ್ಲಿ ಪೋಷಕರ ಪಾತ್ರ ಹಿರಿದಾದುದು. ತಪ್ಪಾದಾಗ ತಿದ್ದುವ ,ಸೋತಾಗ ಸ್ಪೂರ್ತಿಯಾಗುವ ಆತ್ಮೀಯ ಗೆಳೆಯರು ನಾವಾಗಬೇಕು. ಆಡಳಿತ ಮಂಡಳಿ ,ಶಿಕ್ಷಕ ವರ್ಗದೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಪ್ರಾಂಶುಪಾಲೆ ಶೋಭಿತಾ ಸತೀಶ್ ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ 2023-24ನೇ ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯಲ್ಲಿ ಅವರು ಮಾತನಾಡಿದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಈಗಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರಬೇಕು. ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಪೋಷಕರು ತಮ್ಮ ಬೆಂಬಲ ,ಸಲಹೆ ಮತ್ತು ಸಹಕಾರವನ್ನೂ ನೀಡುತ್ತಿರಬೇಕು ಎಂದು ಹೇಳಿದರು.
ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣ ಶಿಕ್ಷಕರು ಮತ್ತು ಪೋಷಕರು. ಮಕ್ಕಳಲ್ಲಿ ಸತ್ಭಾವನೆಯನ್ನು ತುಂಬಿ ಒಬ್ಬ ಸತ್ಪ್ರಜೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮಹತ್ವದ್ದು. ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ಪೋಷಕರ ಪ್ರೋತ್ಸಾಹ ಇನ್ನೂ ಮುಂದೆಯೂ ಇರಲಿ.ಎಂದು ಹೇಳಿದರು.
ರಕ್ಷಕ-ಶಿಕ್ಷಕ ಸಂಘದ ನೂತನ ಅಧ್ಯಕ್ಷ ಸತೀಶ್ ಕಲ್ಲುರಾಯ.ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗಾಗಿ ತಮ್ಮೆಲ್ಲರ ಸಹಕಾರ ಇರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ 2023-24ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ರಚನೆ ಪೋಷಕರ ಮತ್ತು ಆಡಳಿತ ಮಂಡಳಿಯವರ ಸಮ್ಮುಖದಲ್ಲಿ ನಡೆಯಿತು. ಅಧ್ಯಕ್ಷರಾಗಿ ಸತೀಶ್ ಕಲ್ಲುರಾಯ , ಉಪಾಧ್ಯಕ್ಷರಾಗಿ ತೀರ್ಥಾನಂದ ಗೌಡ ಮತ್ತು ಕಾಂತಿ ಶ್ಯಾಮ್, ಹಾಗೆಯೇ ಮಕ್ಕಳ ರಕ್ಷಣಾ ಅಧಿಕಾರಿಯಾಗಿ ಮಧುಶ್ರೀ ಪ್ರಭು ಮತ್ತು ಸದಸ್ಯರಾಗಿ ವಿಜಯ, ವಿಜಯಶ್ರೀ, ಅಶ್ವಿನಿ ಬಿ.ಕೆ., ಗಾಯತ್ರಿ, ರಮಾ ನಾಯ್ಕ್ , ಶಿವಾನಿ ಜಿ., ನಮಿತಾ, ಶಶಿಕಲಾ ಅರ್ತಿಕಜೆ, ಗಣೇಶ್ ಆಚಾರ್, ಅಶ್ವಿನಿ ಪ್ರವೀಣ್, ಜಯರಾಮ ರೈ, ವೀರೇಶ್,ಬಿ. ಯತೀಂದ್ರ, ವಿಶಲಾಕ್ಷಿ ಕೆ.ಪಾಟೀಲ್, ಸುಮತಿ ಕೆ.,ಚಂದ್ರಕಲಾ ಜಿ.,ಜ್ಯೋತಿ ಆರ್.ಭಟ್. ಆಯ್ಕೆಗೊಂಡರು.
ವೇದಿಕೆಯಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ ಬಿ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ, ಉಪನ್ಯಾಸಕಿ ರೇಖಾ ವಂದಿಸಿದರು. ಮಮತ ನಿರೂಪಿಸಿದರು.