ಪುತ್ತೂರು: ಪುತ್ತೂರು : 2021ರಲ್ಲಿ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ವೇಳೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆ ವಿಚಾರದಲ್ಲಿ ದಾಖಲಾದ ಪ್ರಕರಣವನ್ನು ನ್ಯಾಯಲಯ ಖುಲಾಸೆಗೊಳಿಸಿ ಆದೇಶಿಸಿದೆ.
ಅರುಣ್ ಕುಮಾರ್ ಪುತ್ತಿಲ, ಅಶೋಕ್ ಕುಮಾರ್ ಪುತ್ತಿಲ, ಶ್ರೀಕಾಂತ್ ಆಚಾರ್ ಹಿಂದಾರ್ ದೋಷಮುಕ್ತರೆಂದು ನ್ಯಾಯಾಲಯ ಆದೇಶ ನೀಡಿದೆ. ವಕೀಲರಾದ ದೇವಾನಂದ ಕೆ, ಚಿನ್ಮಯ್ ರೈ ಈಶ್ವರಮಂಗಲ,ಹರಿಣಿ ವಾದಿಸಿದರು.
2021ರಲ್ಲಿ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ವೇಳೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ಹಲ್ಲೆ ನಡೆಸಿದ್ದಾರೆಂದು ಸುರೇಶ್ ಕಣ್ಣರಾಯ ರವರು ದೂರು ನೀಡಿದ್ದು, ನಳಿನೀ ಲೋಕಪ್ಪ ಗೌಡ ಮತ್ತು ಲೋಕಪ್ಪ ಗೌಡ ಮುಖ್ಯ ಸಾಕ್ಷಿದಾರರಾಗಿದ್ದರು. ಇದು ಸತ್ಯ ಮತ್ತು ನ್ಯಾಯಕ್ಕೆ ಸಂದ ಗೌರವ ಎಂದು ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯಿಸಿದ್ದಾರೆ.
ನಡೆದ ವಿಚಾರ ಕೋರ್ಟ್ ನಲ್ಲಿ ಹೇಳಿದ್ದೇವೆ. ನಮ್ಮ ಕಣ್ಣೇದುರೇ ನಡೆದ ಘಟನೆ . ನಾನು ಹಾಗೂ ನನ್ನ ಪತ್ನಿ ಪಿನ್ ಟು ಪಿನ್ ಕೋರ್ಟ್‍ನಲ್ಲಿ ಹೇಳಿಕೆ ನೀಡಿದ್ದೇವೆ. ಅಲ್ಲದೆ ಘಟನೆ ವೀಡಿಯೋವನ್ನು ಪೊಲೀಸ್ ಇಲಾಖೆಗೆ ಒಪ್ಪಿಸಿದ್ದೇವೆ. ಘಟನೆಯ ವೀಡಿಯೋವೇ ಕಾಣೆಯಾಗಿದೆ. ಘಟನೆಯನ್ನು ಕೋರ್ಟ್ ಕನ್ಸಿಡರ್ ಮಾಡಿಲ್ಲ. ಆದರೆ ಮೃತ್ಯುಂಜಯೇಶ್ವರನ ಸನ್ನಿಧಿಯಲ್ಲಿ ಘಟನೆ ನಡೆದಿದ್ದು, ಮೃತ್ಯುಂಜಯೇಶ್ವರನ ಕೋರ್ಟ್‍ನಲ್ಲಿ ಅವರ ಆಟ ನಡೆಯಲ್ಲ.
ಲೋಕಪ್ಪ ಗೌಡ, ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ