ಪುತ್ತೂರು: ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ದುಷ್ಕರ್ಮಿಯಿಂದ ಚೂರಿ ಇರಿತಕ್ಕೆ ಒಳಗಾಗಿದ ಯುವತಿ ಮಂಗಳೂರಿಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾಳೆ. ವಿಟ್ಲ ಸಮೀಪದ ಅಳಿಕೆ ಗ್ರಾಮದ ಆದಾಳ ನಿವಾಸಿ ಗೌರಿ (18) ಮೃತಪಟ್ಟವರು.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಬಂದಿ ಪದ್ಮರಾಜ್ ಎಂಬಾತ ಮಾರಕಾಯುದದಿಂದ ಹಲವು ಬಾರಿ ದಾಳಿ ಮಾಡಿದ್ದ. ಬೈಕ್ ನಲ್ಲಿ ಬಂದಿದ್ದ ಆತ, ಕೃತ್ಯ ಎಸಗಿ ಬೈಕನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ. ತಕ್ಷಣ ಗಾಯಾಳು ಗೌರಿಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ತಂದು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆ ಮೂಲಕ ಕಳಹಿಸಿ ಕೊಡಲಾಯಿತು. ಆದರೆ ದಾರಿ ಮಧ್ಯೆ ಆಕೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆ ನಡೆದು ಒಂದೂವರೆ ಗಂಟೆಯೊಳಗಡೆ ಆರೋಪಿಯನ್ನು ಬಂಟ್ವಾಳ ತಾಲೂಕಿನ ಮಾವಿನಕಟ್ಟೆ ಬಳಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯೂ ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ ಪದ್ಮರಾಜ್’ ಎಂದು ತಿಳಿದು ಬಂದಿದೆ.
ಬೈಕ್‍ನಲ್ಲಿ ಬಂದ ದುಷ್ಕರ್ಮಿ ಪದ್ಮರಾಜ್ ಮಾರಕಾಯುದ್ದದಿಂದ 3 ರಿಂದ ನಾಲ್ಕು ಬಾರಿ ಇರಿದು ಗಂಭಿರವಾಗಿ ಗಾಯಗೊಳಿಸಿದ್ದಾನೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ನಡುವಿನ ಜಾಗದಲ್ಲಿ ಈ ದಾಳಿ ನಡೆದಿದೆ. ಗೋಡೆಗೆ ಯುವತಿಯನ್ನು ಒತ್ತಿ ಹಿಡಿದು ದುಷ್ಕರ್ಮಿ ಕತ್ತು ಸೀಳಿರುವುದಾಗಿ ಹೇಳಲಾಗುತ್ತಿದೆ.
ಮೃತ ಗೌರಿ ಹಾಗೂ ಪದ್ಮರಾಜ್ ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಹಲವು ಬಾರಿ ಗಲಾಟೆ ಕೂಡ ಮಾಡಿಕೊಂಡಿದ್ದರು. ಅಲ್ಲದೇ ಈ ಸಂಬಂಧ ಈ ಮೊದಲೇ ವಿಟ್ಲ ಠಾಣೆಯಲ್ಲೂ ದೂರು ದಾಖಲಾಗಿತ್ತು ಎಂದು ಇದೇ ವೇಳೆ ಎಸ್ಪಿ ಮಾಹಿತಿ ನೀಡಿದ್ದಾರೆ. ಯುವತಿ ಹಾಗೂ ಆರೋಪಿ ಪದ್ಮರಾಜ್ ನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆಕೆ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ ನಲ್ಲಿ ಬಂದ ಯುವಕ ಆಕೆಯನ್ನು ಗೋಡೆಗೆ ಒತ್ತಿ ಹಿಡಿದು ಆಕೆಯ ಕತ್ತಿಗೆ ಚೂರಿಯಿಂದ ಇರಿದಿರುವುದಾಗಿ ಹೇಳಲಾಗುತ್ತಿದೆ.