ಪುತ್ತೂರು: ಬಂಟ್ವಾಳ ತಾಲೂಕಿನ ಮಾಣಿಲ ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಶನಿವಾರ ಚಾಲನೆ ನೀಡಿದರು.
16.4 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿರುವ ಕಾಮಗಾರಿಗಳಿಗೆ ಶಾಲಾ ವಾರ್ಷಿಕೋತ್ಸವ ಸಂದರ್ಭ ಶಿಲಾನ್ಯಾಸ ನೆರವೇರಿಸಲಾಯಿತು.
ಬಳಿಕ ಮಾತನಾಡಿದ ಶಾಸಕರು, ನಮ್ಮ ಊರಿಗಿಂತ ಮೊದಲು ನಮ್ಮ ಶಾಲೆ ಹೇಗಿರಬೇಕು ಎಂಬ ಚಿಂತನೆ ನಮ್ಮಲ್ಲಿರಬೇಕು. ಒಂದು ಶಾಲೆಯನ್ನು ನೋಡಿದಾಗ, ಆ ಊರು ಹೇಗಿದೆ ಎನ್ನುವುದನ್ನು ಅರ್ಥವಿಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಾರೆ. ಇಂದು ನಾವಿರು ಶಾಲೆ, ಮುಂದೆ ಪ್ರೌಢಶಾಲೆಯಾಗಿ ಬೆಳೆಯಬೇಕು ಎಂಬ ಚಿಂತನೆ ಮಾಡಿದಾಗ, ನಮ್ಮ ಮಕ್ಕಳು ನಮ್ಮದೇ ಊರಿನಲ್ಲಿ ಕಲಿಕೆ ಮಾಡಿದಂತಾಗುತ್ತದೆ ಎಂದರು.
ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತ, ಎಸ್ ಡಿ ಎಂ ಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಾಲ್ಲು, ಮುಖ್ಯಗುರು ಸುಬ್ರಮಣ್ಯ ಭಟ್, ಶಿಕ್ಷಕರು ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.