ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿಜ್ಞಾನ ರಶ್ಮಿ ಕಾರ್ಯಕ್ರಮ ಡಿ. 31ರಂದು ವಿದ್ಯಾಚೇತನ ಅಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ವಿಜ್ಞಾನ ಪ್ರಯೋಗದ ಆಧಾರದಲ್ಲಿ ಬೆಳೆದು ಬಂದಿದೆ. ಆದ್ದರಿಂದ ಪ್ರಾಯೋಗಿಕ ಅಭ್ಯಾಸ ಮಾಡಿದರೆ ಮಾತ್ರ ವಿಜ್ಞಾನದಲ್ಲಿ ಆಸಕ್ತಿ ಬೆಳೆಯುತ್ತದೆ ಎಂದರು.
ದೋಲ್ಪಾಡಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಶಿಧರ ಪಿ. ಮಾತನಾಡಿ, ವಿಶ್ವ ಬಹಳಷ್ಟು ಅಭಿವೃದ್ಧಿಯತ್ತ ಸಾಗುತ್ತಿದೆ. ಆದ್ದರಿಂದ ಆಧುನಿಕತೆಯಲ್ಲಿ ನಮ್ಮ ಜೀವನಕ್ಕೆ ವಿಜ್ಞಾನ ಬಹು ಅಗತ್ಯ ಎಂದರು.
ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಣವ್ ಸ್ವಾಗತಿಸಿ, ನಿಶಾಂತ್ ವಂದಿಸಿದರು. ಫಾತಿಮತ್ ಸಾಮ್ನಾ ಜಿ.ಕೆ., ಕಸ್ತೂರಿ ಕೆ.ಜಿ., ಮುರಳೀಧರ ಕೆ.ಎಲ್. ಕಾರ್ಯಕ್ರಮ ನಿರ್ವಹಿಸಿದರು.