ಪುತ್ತೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿಡಿ. 31ರಿಂದ ಜ. 7ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮಾಚಿಲ ಶ್ರೀ ಉಳ್ಳಾಕ್ಲು ಹಾಗೂ ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಲಿದೆ.
31ರಂದು ಬೆಳಿಗ್ಗೆ 8ಕ್ಕೆ ಅರುವಗುತ್ತು ಮನೆಯಿಂದ ದೇವರ ಆಭರಣ ತರುವುದು, 8:30ಕ್ಕೆ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ, ಹೊರಕಾಣಿಕೆ ತರಲಾಗುವುದು. 9ಕ್ಕೆ ದೇವಾಲಯದಲ್ಲಿ ತೋರಣ ಮುಹೂರ್ತ, 12ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ತಂತ್ರಿ ಪರಿವಾರದವರ ಆಗಮನ, ಸ್ವಾಗತ. ರಾತ್ರಿ 7ಕ್ಕೆ ಪ್ರಾಸಾದ ಪರಿಗ್ರಹ, ಪುಣ್ಯಾಹ, ಅಂಕುರಾರ್ಪಣೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 7 ರಿಂದ ಸಭಾ ಕಾರ್ಯಕ್ರಮ ಹಾಗೂ 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಜ. 1ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ಅಂಕುರ ಪೂಜೆ, ಬಿಂಬಶುದ್ಧಿ, ಕಲಶಪೂಜೆ, ಬಿಂಬಶುದ್ಧಿ, ಕಲಶಾಭಿಷೇಕ, ಸ್ಕಂದ ಪ್ರಾಯಶ್ಚಿತ ಹೋಮ, ಪ್ರೋಕ್ಷ ಹೋಮ, ಹೋಮ ಕಲಶಾಭಿಷೇಕ, ಮಧ್ಯಾಹ್ನ 12ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಸಭಾ ಕಾರ್ಯಕ್ರಮ, 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
2ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ಶಾಂತಿ ಹೋಮ, ಸ್ವಶಾಂತಿ, ಘೋರ ಶಾಂತಿ, ಅದ್ಬುತ ಶಾಂತಿ, ಹೋಮ ಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಅಂಕುರಪೂಜೆ, ದುರ್ಗಾನಮಸ್ಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
3ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ತತ್ವ ಹೋಮ, ತತ್ವಕಲಶ ಪೂಜೆ, ಅನುಜ್ಞಾ ಕಲಶಪೂಜೆ, ತತ್ವಕಲಶಾಭಿಷೇಕ, ಅನುಜ್ಞಾಕಲಶಾಭಿಷೇಕ ಮಧ್ಯಾಹ್ನ 12ರಿಂದ ಮಹಾಪೂಜೆ, ಮಂಟಪ ನಮಸ್ಕಾರ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಶ್ರೀ ಉಳ್ಳಾಕ್ಲು ಮತ್ತು ಶ್ರೀ ಉಳ್ಳಾಲ್ತಿ ಸ್ಥಾನದಲ್ಲಿ ವಾಸ್ತು (ರಾಕ್ಸೋಘ್ನ ) ಹೋಮ, ವಾಸ್ತು ಬಲಿ, ಅಧಿವಾಸ ಹೋಮ, ಧ್ಯಾನಾದಿವಸ, ರಾತ್ರಿ 7ರಿಂದ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
4ರಂದು ಬೆಳಿಗ್ಗೆ 8ರಿಂದ ಶ್ರೀ ಉಳ್ಳಾಕ್ಲು ಮತ್ತು ಶ್ರೀ ಉಳ್ಳಾಲ್ತಿ ಸ್ಥಾನದಲ್ಲಿ ಗಣಪತಿ ಹೋಮ, ಸಾನಿಧ್ಯ ಕಲಶಪೂಜೆ, ಅನುಜ್ಞಾ ಕಲಶಪೂಜೆ, ಮಧ್ಯಾಹ್ನ 11.45ರಿಂದ 12.22ರವರೆಗಿನ ಮೀನ ಲಗ್ನ ಮುಹೂರ್ತದಲ್ಲಿ ಶ್ರೀ ಉಳ್ಳಾಕ್ಲು ಮತ್ತು ಶ್ರೀ ಉಳ್ಳಾಲ್ತಿ ಪ್ರತಿಷ್ಠೆ ಸಾನಿಧ್ಯ ಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ದೇವಸ್ಥಾನದಲ್ಲಿ ಕುಂಬೇಶ ಕರ್ಕರೀ ಕಲಶಪೂಜೆ, ಬ್ರಹ್ಮ ಕಲಶಪೂಜೆ ಪರಿಕಲಶಪೂಜೆ, ಕಳಶಾಧಿವಾಸ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಸಭಾ ಕಾರ್ಯಕ್ರಮ, 8ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 9ರಿಂದ ಜಾದೂ ಪ್ರದರ್ಶನ ನಡೆಯಲಿದೆ.
5ರಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, 10.28ರ ಕುಂಭಲಗ್ನದಲ್ಲಿ ಅಷ್ಠಬಂಧ ಲೇಪನ, 11.14ರ ಮೀನ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ರಂಗಪೂಜೆ, ಶ್ರೀ ಭೂತ ಬಲಿ ರಾಜಂಗಣ ಪ್ರಸಾದ, ಬಟ್ಟಲು ಕಾಣಿಕೆ, ನಾಲ್ಕಂಭ ಕ್ಷೇತ್ರದಲ್ಲಿ ಕಟ್ಟೆ ಪೂಜೆ, ಮಂತ್ರಾಕ್ಷತೆ, ಸಂಜೆ 5ರಿಂದ ಲಕ್ಷ್ಮೀಪ್ರಿಯಾ ಭಜನೆ ನಡೆಯಲಿದೆ.
6ರಂದು ಸಂಜೆ 5:30ಕ್ಕೆ ಶ್ರೀ ಉಳ್ಳಾಕ್ಲು ಭಂಡಾರ ತೆಗೆಯುವುದು, ರಾತ್ರಿ 9ಕ್ಕೆ ಮಸ್ಕಿರಿ ಕುಡ್ಲ ತಂಡದಿಂದ ತೆಲಿಕೆ ಬಂಜಿ ನಿಲಿಕೆ ಹಾಸ್ಯ ಗೊಂಚಿಲು ಹಾಗೂ ನೃತ್ಯ ಗಾನ ವೈಭವ ನಡೆಯಲಿದೆ. 7ರಂದು ಬೆಳಿಗ್ಗೆ 7ರಿಂದ ಶ್ರೀ ಉಳ್ಳಾಕ್ಲು ನೇಮೋತ್ಸವ, ಸಂಜೆ 5:30ಕ್ಕೆ ಶ್ರೀ ಉಳ್ಳಾಲ್ತಿ ಭಂಡಾರ ತೆಗೆದು, 6.30ಕ್ಕೆ ಶ್ರೀ ನಾಲ್ಕಂಭ ಕ್ಷೇತ್ರದ ಉಳ್ಳಾಲ್ತಿ ಭಂಡಾರ ಆಗಮನ, ರಾತ್ರಿ 8ರಿಂದ ಶ್ರೀ ಉಳ್ಳಾಲ್ತಿ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.