ಪುತ್ತೂರು: ದ.ಕ.ಜಿಲ್ಲೆ ವಿದ್ಯಾಭಾರತಿ ಕರ್ನಾಟಕ ವತಿಯಿಂದ ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ಬಾಲವರ್ಗದ ಬಾಲಕಿಯರ ಮತ್ತು ಬಾಲವರ್ಗದ ಬಾಲಕರ ಎರಡೂ ವಿಭಾಗಗಳಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಬಾಲವರ್ಗದ ಬಾಲಕಿಯರ ವಿಭಾಗವನ್ನು ಕೃತಿ, ಶ್ರಾವ್ಯ, ಸಂಧ್ಯಾ , ಶೀಲ, ದೃಷ, ನಳಿನ ಎಚ್.ಬಿ., ಸಿಂಚನ, ನೇಹಾ ಎಂ., ಪಿ ರಕ್ಷಾ, ಪೃಥ್ವಿ, ಭುವಿ ಆರ್., ಧನ್ಯ ಕೆ., ವರ್ಷಾ ಬಿ.ಕೆ., ಹರ್ಷಿತಾ ಜಿ., ಅರ್ಚನಾ, ಯೋಗ್ಯ ಯು.ಬಿ., ಕೃತಿ ಪ್ರತಿನಿಧಿಸಿದ್ದರು.
ಬಾಲವರ್ಗದ ಬಾಲಕರ ವಿಭಾಗವನ್ನು ಚಿಂತನ್, ಭವಿಷ್ ಜಿ., ವನೀಶ್, ತೇಜಸ್, ತರುಣ್, ಲಿಖಿತ್ ಎಸ್., ದೇಶ್ಚಿತ್ ಎಸ್., ಕೌಶಿಕ್ ಕೆ.ಎನ್., ಸೃಜನ್, ಅಭಿಷೇಕ್, ಭಾಸ್ವತ್, ವಿನಿಲ್, ಕೀರ್ತನ್ ಕೆ., ಭವಿತ್ ಎ.ಬಿ., ಪುನೀತ್, ಮನ್ವಿತ್ ಬಿ.ಎಲ್., ಪ್ರತಿನಿಧಿಸಿದ್ದರು.
ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್ ಮತ್ತು ಹರಿಣಾಕ್ಷಿ ಹಾಗೂ ಹಿರಿಯ ವಿದ್ಯಾರ್ಥಿ ಎನ್.ಐ.ಎಸ್ ತರಬೇತುದಾರ ಕಾರ್ತಿಕ್ ತರಬೇತಿ ನೀಡಿದ್ದರು.