ಪುತ್ತೂರು: ತುಳುಕೂಟೊ ಪುತ್ತೂರು ಇದರ ಸ್ವರ್ಣ ಮಹೋತ್ಸವದ ಉದ್ಘಾಟನೆ ಹಾಗೂ ಪುತ್ತೂರು ತಾಲೂಕು ತುಳುವೆರೆ ಮೇಳೊ 2023 ಜ. 7ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿದೆ ಎಂದು ತುಳುವೆರೆ ಮೇಳೊ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸುವರು. ಪುತ್ತೂರು ತಾಲೂಕು ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಅಧ್ಯಕ್ಷತೆ ವಹಿಸುವರು. ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ಪುಸ್ತಕ ಮೇಳವನ್ನು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸಮಿತಿ ಸಂಚಾಲಕ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ಪ್ರೇಮಲತಾ ರಾವ್, ಮುಳಿಯ ಜ್ಯುವೆಲ್ಸ್ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ನೆಹರುನಗರ ಸುದಾನ ವಿದ್ಯಾಸಂಸ್ಥೆ ಸಂಚಾಲಕ ವಿಜಯ ಹಾರ್ವಿನ್, ಎಂಪಿಎಂ ಜ್ಯೂನಿಯರ್ ಕಾಲೇಜು ಸಂಚಾಲಕ ಎಂ.ಪಿ. ಅಬೂಬಕ್ಕರ್, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು, ಪುತ್ತೂರು ಕೊಟ್ಟಕಲ್ ಆರ್ಯವೈದ್ಯ ಶಾಲೆಯ ಡಾ. ಪ್ರದೀಪ್ ಕುಮಾರ್ ಉಪಸ್ಥಿತರಿರುವರು ಎಂದವರು.
ಬೆಳಿಗ್ಗೆ 11.15ರಿಂದ ಕಬಿತೆದ ವೇಳ್ಯೊ – ಎನ್ನ ಕಬಿತೆ, 11.30ರಿಂದ ವಿಚಾರೊ – ಪದೊ – ಚಿತ್ರೊ, ಮಧ್ಯಾಹ್ನ 1.15ರಿಂದ ನಲಿಕೆದ ವೇಳ್ಯೊ – ಎಂಕ್ಲೆ ನಲಿಕೆ, 2ರಿಂದ ತುಳು ಜನಪದ ನಲಿಕೆ, 3ರಿಂದ ವಿಚಾರೊ – ತುಳು ಬದ್ಕ್ – ಅಂಚಿ – ಇಂಚಿ, ಸಂಜೆ 6ರಿಂದ ತುಳುನಾಡ್ದ ಸೃಷ್ಟಿ ಯಕ್ಷಗಾನ ಬಯಲಾಟ ನಡೆಯಲಿದೆ.
ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಜೆ 4.30ರಿಂದ 6ರವರೆಗೆ ಸಮಾರೋಪ ನಡೆಯಲಿದೆ. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಸಮಾರೋಪ ಭಾಷಣ ಮಾಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಪ್ರೊ. ವಿ.ಬಿ. ಅರ್ತಿಕಜೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಆಲಂಗಾರ್ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು ಸಂಚಾಲಕ ದಯಾನಂದ ರೈ ಮನವಳಿಕೆ, ವಕೀಲ ಎನ್.ಕೆ. ಜಗನ್ನಿವಾಸ್ ರಾವ್, ಕ್ಯಾನ್ಸರ್ ತಜ್ಞ ಡಾ. ರಘು ಬೆಳ್ಳಿಪ್ಪಾಡಿ, ಪುತ್ತೂರು ವರ್ತಕ ಸಂಘ ಅಧ್ಯಕ್ಷ ಜಾನ್ ಕುಟಿನ್ಹೊ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, 1ನೇ ವರ್ಗದ ಪಿಡಬ್ಲ್ಯೂಡಿ ಗುತ್ತಿಗೆದಾರ ರಾಧಾಕೃಷ್ಣ ಉದಯಗಿರಿ, ವಕೀಲ ಚಿದಾನಂದ ಬೈಲಾಡಿ, ಪದ್ಮಶ್ರೀ ಅಸೋಸಿಯೇಟ್ಸ್ ತೆರಿಗೆ ಸಲಹೆಗಾರ ಕೃಷ್ಣ ಎಂ., ಅಬ್ದುಲ್ ರಝಾಕ್ ಕಬಕಕಾರ್ಸ್ ಉಪಸ್ಥಿತರಿರುವರು.
ಇದೇ ಸಂದರ್ಭ ದೈವ ನರ್ತಕ ಶೀನ ಅಜಲಾಯ ಕಣಿಯಾರು, ಪಂಡಿತ ಮುಕುಂದ ಶಾಂತಿವನ, ತುಳು ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಜಗದೀಶ್ ಬಲ್ಲಾಳ್ ಕೆದಂಬಾಡಿ ಬೂಡು, ಸತೀಶ್ ಬಲ್ಯಾಯ ಕೆಮ್ಮಾಯಿ, ವೆಂಕಮ್ಮ ಕೋಡಂಬು ಅವರನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.