ಪುತ್ತೂರು: ಪುತ್ತೂರು ದೇವಾಂಗ ಸೇವಾ ಸಮಾಜ ಬಾಂಧವರಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಭಾನುವಾರ ಸರಕಾರಿ ನೌಕರರ ಸಭಾಭವನದಲ್ಲಿ ನಡೆಯಿತು.
ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಟೀಚರ್ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸುಗುಣ ಎಂ ಶೆಟ್ಟಿ, ಎಮ್ ಎನ್ ಚೆಟ್ಟಿಯಾರು, ಸುರೇಶ್ ಶೆಟ್ಟಿ, ದಿವಾಕರ್ ಶೆಟ್ಟಿ ಕುಂಬ್ರ ಶುಭ ಹಾರೈಸಿದರು. ಎಂ ಎಸ್ ಚೆಟ್ಟಿಯಾರ್ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.
ವಿವಿಧ ಆಟೋಟ ಸ್ಪರ್ಧೆ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಮಾಜ ಬಾಂಧವರೆಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದಿದ್ದ ವಿಶೇಷ ಭಕ್ಷ್ಯಗಳು ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದು ಎಲ್ಲರೂ ಒಗ್ಗೂಡಿ ಭಕ್ಷ್ಯಗಳ ಸವಿರುಚಿಯನ್ನು ಸವಿದರು. ಈ ಸಂದರ್ಭದಲ್ಲಿ ನೂತನ ಯುವ ದೇವಾಂಗ ಸಮಿತಿ ರಚನೆಯಾಯಿತು. ಪ್ರಭಾ ಟೀಚರ್ ಕಾರ್ಯಕ್ರಮ ನಡೆಸಿಕೊಟ್ಟರು.
ನಂದಕುಮಾರ್ ಬೆಂಗಳೂರು, ಎಂ ಎಸ್ ಚೆಟ್ಟಿಯಾರ್, ಸತೀಶ್, ಶರತ್ ಚಂದ್ರ, ಪ್ರವೀಣ್ ಕುಮಾರ್, ದೇವಕಿ ಟೀಚರ್, ಶಿವಕುಮಾರ್ ಕಾರ್ಯಕ್ರಮಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದರು.
ಆಶ್ರಿತಾಳ ಪ್ರಾರ್ಥನೆ ಹಾಡಿದರು. ವೈಶಾಲಿ, ಪ್ರಭಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಿಥಿಲ್, ಸುರೇಶ್ ಬಾಚು, ದಿವಾಕರ್ ಶೆಟ್ಟಿ, ಮನೋಹರ್ ಶೆಟ್ಟಿ, ಸುನೀತಾ ರವೀಂದ್ರ, ವಿದ್ಯಾ ಗಿರಿಧರ್, ಸಂದೀಪ್, ಭರತ್, ಸುಮಿತ್ರ ಹಾಗೂ ನರೇಶ್ ಸಹಕರಿಸಿದರು. ಅಧ್ಯಕ್ಷ ದಿವಾಕರ್ ಶೆಟ್ಟಿ ವಂದಿಸಿದರು.