ಪುತ್ತೂರು: ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಸಿಗಬೇಕಾದ ಬೋನಸ್ ಬಾಕಿ ಇದ್ದು ಕಳೆದ ಒಂದು ವರ್ಷದಿಂದ ನಿಗಮಕ್ಕೆ ಮನವಿ ಮಾಡುತ್ತಿದ್ದರೂ ಬೋನಸ್ ಇನ್ನೂ ಸಿಗದೇ ಇದ್ದು ಈ ವಿಚಾರವನ್ನು ಸರಕಾರದ ಗಮನಸೆಳೆಯಬೇಕೆಂದು ಆಗ್ರಹಿಸಿ ಮತ್ತು ಬೋನಸ್ ಕೊಡಿಸುವಲ್ಲಿ ನೆರವು ನೀಡಬೇಕೆಂದು ಪೆರ್ಲಂಪಾಡಿ ಸಿಆರ್‌ಸಿ ಕಾಲನಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಸಾಸಕ ಅಶೋಕ್ ರೈಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ರಬ್ಬರ್ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರುಗಳಿಗೆ ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಕನಿಷ್ಟ ಬೋನಸ್ (8.33) ನೀಡಲಾಗುತ್ತಿದೆ. ಈ ವರ್ಷ ೨೦% ಬೋನಸ್ ಕೊಡಬಹುದೆಂದು ಬಹಳ ನಿರೀಕ್ಷೆಯಲ್ಲಿದ್ದರು. ಅದರೆ ಈ ವರ್ಷ ಕೂಡಾ ೮.೩೩ಕ್ಕೆ ಸೀಮಿತಗೊಳಿಸಲಾಗಿತ್ತು. ಈಗಾಗಲೇ ೮.೩೩ ಬೋನಸ್ ನೀಡಲಗಿದ್ದು ಉಳಿದ ಬೋನಸ್ ನಿಮಗದ ವತಿಯಿಂದ ನೀಡಿಲ್ಲ ಎಂದು ಕಾರ್ಮಿಕರು ಶಾಸಕರಲ್ಲಿ ತಿಳಿಸಿದರು. ನಾವು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇವೆ, ಬೋನಸ್ ಸಿಗುತ್ತದೆ ಎಂಬ ಆಸೆಯಿಂದ ರಾತ್ರಿ ಹಗಲೆನ್ನದೆ ಕೆಲಸ ಮಾಡಿದ್ದೇವೆ ನಮಗೆ ನ್ಯಾಯ ಕೊಡಿಸಿ ಎಂದು ಶಾಸಕರಲ್ಲಿ ಮನವಿ ಮಾಡಿದರು.
ಸಚಿವರಿಗೆ ಕರೆ ಮಾಡಿದ ಶಾಸಕರು :
ಕಾರ್ಮಿಕರ ಸಂಕಷ್ಟವನ್ನು ಆಲಿಸಿದ ಶಾಸಕ ಅಶೋಕ್ ರೈಯವರು ತಕ್ಷಣ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಬಡ ಕಾರ್ಮಿಕರಿಗೆ ಸಿಗಬೇಕಾದ ಬೋನಸ್ ಇನ್ನೂ ಅವರ ಕೈ ಸೇರಿಲ್ಲ. ಕಾರ್ಮಿಕರು ಬಂದು ತನ್ನ ಕಚೇರಿಯಲ್ಲಿ ಕುಳಿತಿದ್ದಾರೆ ಅವರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದು ಸಚಿವರಲ್ಲಿ ಶಾಸಕರು ವಿನಂತಿಸಿದ್ದಾರೆ. ಒಂದು ವಾರದೊಳಗೆ ವ್ಯವಸ್ಥೆ ಮಾಡುವುದಾಗಿ ಸಚಿವರು ಶಾಸಕರಿಗೆ ಭರವಸೆ ನೀಡಿದರು.