ಪುತ್ತೂರು: ಶಿಕ್ಷಣ ಎನ್ನುವುದು ಜ್ಞಾನಾರ್ಜನೆಗೆ ಇರುವುದೇ ಹೊರತು ಧನಾರ್ಜನೆಗಾಗಿ ಅಲ್ಲ. ಧನಾರ್ಜನೆಗಾಗಿ ಮಕ್ಕಳನ್ನು ತಯಾರು ಮಾಡಿದರೆ ಅವರು ನಾಳೆ ನಮ್ಮ ಅಂಕೆಯಲ್ಲಿ ಇರುವುದಿಲ್ಲ. ಡಾಕ್ಟರ್ ಇಂಜಿನಿಯರ್‌ಗಳನ್ನು ತಯಾರು ಮಾಡುವುದಕ್ಕಿಂತ ದೇಶಪ್ರೇಮ ಹೊಂದಿರುವ ನಾಯಕರನ್ನು ತಯಾರು ಮಾಡುವುದೇ ಆದ್ಯತೆಯಾಗಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ನಡೆದ ರಕ್ಷಕ-ಶಿಕ್ಷಕ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ವೈ ಎ. ಮಾತನಾಡಿ, ಬದುಕು ತುಂಬಾ ಸುಂದರವಾಗಿದೆ. ವಿದ್ಯಾರ್ಥಿಗಳು ತಮಗೆ ಒದಗಿದ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಮಾಡಿಕೊಂಡು ಒಳ್ಳೆಯ ಸದ್ವಿಚಾರಿ ನಾಗರಿಕರಾಗಿ ಸಮಾಜದಲ್ಲಿ ಮಾದರಿ ಬದುಕನ್ನು ಕಟ್ಟಿಕೊಳ್ಳಬೇಕು. ಮಕ್ಕಳು ಪೂರ್ಣ ಶ್ರಮವಹಿಸಿ ವಿದ್ಯಾರ್ಜನೆ ಮಾಡಿ ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ,ಎ ಸ್ಪರ್ಧಾತ್ಮಕ ಪರೀಕ್ಷಾ ವಿಭಾಗದ ಸಂಚಾಲಕ ಕಿಶೋರ್ ಭಟ್, ಎಸ್ಟೇಟ್ ಮ್ಯಾನೇಜರ್ ರಾಜೇಂದ್ರ ಪ್ರಸಾದ್ ವಿವಿಧ ವಿಷಯಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್ ಹಾಗೂ ವಸತಿ ನಿಲಯದ ಮುಖ್ಯ ಮೇಲ್ವಿಚಾರಕ ಆಶಿಕ್ ಬಾಲಚಂದ್ರ ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸುಚಿತ್ರ ಪ್ರಭು ಸ್ವಾಗತಿಸಿದರು. ಉಪನ್ಯಾಸಕಿ ಅಪರ್ಣ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕ ನಮ್ರತ್ ಜಿ ಉಚ್ಚಿಲ ಕಾರ್ಯ ಕ್ರಮ ನಿರೂಪಿಸಿದರು.