ಪುತ್ತೂರು: ಸರಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಗದ ಬಡವರ ಮಕ್ಕಳೂ ಸಿಇಟಿ, ನೀಟ್ ಪರೀಕ್ಷೆ ಬರೆದು ಉನ್ನತ ವ್ಯಾಸಂಗ ಮಾಡುವಂತಗಬೇಕು, ಪ್ರತೀಯೊಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಗಬೇಕೆಂಬುದೇ ನನ್ನ ಉದ್ದೇಶವಾಗಿದೆ ಇದಕ್ಕಾಗಿ ಜಿಲ್ಲೆಯಲ್ಲೇ ಪ್ರಥಮ ಬಾರಿ ಎಂಬಂತೆ ಪುತ್ತೂರಿನ ಕೊಂಬೆಟ್ಟು ಪ ಪೂ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ಕೋಚಿಂಗ್ ತರಗತಿಯನ್ನು ಪ್ರಾರಂಭಿಸಲಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಕೊಂಬೆಟ್ಟು ಪ ಪೂ ಕಾಲೇಜಿನಲ್ಲಿ ಶಿಕ್ಷಕರ ನೂತನ ಕೊಠಡಿ, ಗ್ರೀನ್ ಬೋರ್ಡು ಮತ್ತು ಸಿಇಟಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಎಲ್ಲಾ ಸೌಲಭ್ಯಗಳೂ ಸರಕಾರಿ ಕಾಲೇಜಿನಲ್ಲಿ ದೊರೆಯಬೇಕು. ಸರಕಾರಿ ಕಾಲೇಜಿನಲ್ಲಿ ಯಾವುದೂ ಇಲ್ಲ ಎನ್ನುವಂತಗಬಾರದು. ಹೆಚ್ಚಾಗಿ ಬಡವರ ಮಕ್ಕಳೇ ಸರಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಸೌಲಭ್ಯದ ಕೊರತೆಯಿಂದ ವಂಚತರಾಗಬಾರದು ಇದಕ್ಕಾಗಿ ನಾನು ಮೊದಲ ಬಾರಿ ಎಂಬಂತೆ ಕೋಚಿಂಗ್ ತರಗತಿಯನ್ನು ಪ್ರಾರಂಭ ಮಾಡಿಸಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಉಚಿತವಾಗಿಯೇ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಲಾಗುವುದು ಮತ್ತು ಇದಕ್ಕಾಗಿ ಉನ್ನತ ತರಬೇತುದಾರರನ್ನು ಕರೆಸಲಾಗುವುದು ಎಂದು ಶಾಸಕರು ಹೇಳಿದರು. ಕೊಂಬೆಟ್ಟು ಸ ಪ ಪೂ ಕಾಲೇಜಿನಲ್ಲಿ ಹೊಸ ಬದಲಾವಣೆ ತರುವ ಉದ್ದೇಶವಿದ್ದು ಇದಕ್ಕಾಗಿ ಶಿಕ್ಷಕ ವೃಂದ ಮತ್ತು ಪೋಷಕರ ಸಹಕಾರವನ್ನು ಕೋರಿದರು.
ಕಾಲೇಜಿನ ಕಾರ್ಯಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳು ಯಾವುದೇ ಸ್ಥಾನದಲ್ಲಿದ್ದರೂ ಕಲಿತ ಶಾಲೆಯನ್ನು ಮರೆಯಬಾರದು. ತಾವು ಕಲಿತ ಶಾಲೆಗೆ ಯಾವುದಾದರೂ ಸಹಾಯ ಮಾಡುವಂತಾಗಬೇಕು, ನಮ್ಮಿಂದಾಗಿ ಒಬ್ಬ ವಿದ್ಯಾರ್ಥಿ ಭವಿಷ್ಯ ಉಜ್ವಲವಾದರೆ ಅದು ನಮಗೆ ಸಂತೋಷ ಸಂಗತಿಯಾಗಿದೆ. ಮೊದಲ ಬಾರಿಗೆ ಸರಕಾರಿ ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡಿರುವುದು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ದೊಡ್ಡ ವರದಾನವಾಗಿದೆ ಎಂದು ಹೇಳಿದರು.
ಜಿ ಎಲ್ ಆಚರ್ಯಜ್ಯುವೆಲ್ಲರ್‍ಸ್‌ನ ಲಕ್ಷ್ಮೀ ಕಾಂತ್ ಆಚಾರ್ಯ ಮಾತನಾಡಿ, ನಾನು ಈ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು ಎಲ್ಲಾ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ಕಾಲೇಜಿನ ಅಭಿವೃದ್ದಿಗೆ ಶ್ರಮಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಧರ್ಣಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನಲ್ಲಿ ಸಿಇಟಿ ಮತ್ತು ನೀಟ್ ಕೋಚಿಂಗ್ ಕ್ಲಾಸ್ ಹಲವು ವರ್ಷಗಳ ಕನಸಾಗಿದ್ದು ಅದು ಈಗ ನನಸಾಗಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಶಾಸಕರು ಕಾಲೇಜಿನಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಬರೆದಿದ್ದಾರೆ ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವಂತಾಗಗಲಿ ಎಂದರು.
ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಜೋಕಿಂ ಡಿಸೋಜಾ, ಉಪಪ್ರಾಂಶುಪಾಲ ವಸಂತಮೂಲ್ಯ ಪಿ ಉಪಸ್ಥಿತರಿದ್ದರು. ಉಪನ್ಯಾಸಕ ಗೌತಮ್ ಕೆ ಕಾಮತ್ ಸ್ವಾಗತಿಸಿದರು. ಉಪನ್ಯಾಸಕ ವಿನೋದ್ ಎ ವಂದಿಸಿದರು. ಉಪನ್ಯಾಸಕ ಪದ್ಮನಾಭ ಎಸ್ ಕಾರ್ಯಕ್ರಮ ನಿರೂಪಿಸಿದರು.